ಜಿಲ್ಲೆ

ಶಿಸ್ತು, ನಾಯಕತ್ವ ಬೆಳೆಸುವ ಎನ್‌ಸಿಸಿ: ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಎನ್‌ಸಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ನಾಯಕತ್ವದ ಗುಣವನ್ನು ಬೆಳೆಸುತ್ತದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹೇಳಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಿಇಟಿ ಹಾಗೂ ತ್ರೀ ಕರ್ನಾಟಕ ನೌಕಾಘಟಕ ಮೈಸೂರು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ನೇವಲ್ ವಿಂಗ್ ಕೆಡೆಟ್‌ಗಳ ಹತ್ತು ದಿನದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ಚಾರಿತ್ಯ, ಸ್ನೇಹಪರತೆ, ಜಾತ್ಯಾತೀತ ದೃಷ್ಟಿಕೋನ ಮತ್ತು ನಿಸ್ವಾರ್ಥ ಸೇವೆ, ದೇಶಭಕ್ತಿ, ಸಮಗ್ರತೆ, ಶಿಸ್ತು, ನಾಯಕತ್ವ ಹಾಗೂ ಸಾಮಾಜಿಕ ಸೇವೆಯಂತಹ ಪ್ರಮುಖ ಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೆಫ್ಟಿನೆಂಟ್ ಕಮಾಂಡರ್ ವಿನಯ್ ರಾಮಚಂದ್ರನ್ ಮಾತನಾಡಿದರು. ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಎಸ್.ವಿನಯ್, ದೈಹಿಕ ಶಿಕ್ಷಣ ನಿರ್ದೇಶಕ ಅನಂತಪದ್ಮನಾಭ ಪ್ರಭು, ಸಹಾಯಕ ನಿರ್ದೇಶಕಿ ಆರ್.ವಿ.ವಿದ್ಯಾ, ಮುಖ್ಯ ತರಬೇತುದಾರ ಸುರೇಂದ್ರಸಿಂಗ್ ಇತರರಿದ್ದರು.