ಜಿಲ್ಲೆ

ಭಾಷೆ ಬದುಕು ಬೆಳವಣಿಗೆ: ನವಕರ್ನಾಟಕ ನಿರ್ಮಾಣ ಸಂವಾದದಲ್ಲಿ ಮೂಡಿದ ಆಶಾವಾದ

ಕನ್ನಡ ಭಾಷೆ ಜತೆಗೆ ಕನ್ನಡಿಗರ ಬದುಕು ಸಮೃದ್ಧಗೊಳಿಸುವ ಸಂಕಲ್ಪ. ಸುಸ್ಥಿರ, ಸರ್ವಾಂಗೀಣ ಅಭಿವೃದ್ಧಿ ಹಂಬಲ. ಇವೆರಡು ನೆಲೆಯ ಮೇಲೆ ಕರ್ನಾಟಕದ ಮುನ್ನೋಟ ರೂಪುಗೊಳ್ಳಬೇಕು ಎಂದು ಸಚಿವ ಮುರುಗೇಶ್​ ನಿರಾಣಿ, ಚಿತ್ರನಟಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯೆ ತಾರಾ ಅನುರಾಧ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮಹಲಿಂಗಯ್ಯ ಆಶಿಸಿದರು. ರಾಜ್ಯೋತ್ಸವ ನಿಮಿತ್ತ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಹಮ್ಮಿಕೊಂಡಿದ್ದ "ನವಕರ್ನಾಟಕ ನಿರ್ಮಾಣಕ್ಕೆ ದಿಕ್ಸೂಚಿ' ಸಂವಾದದಲ್ಲಿ ಅವರು ವಿಚಾರಧಾರೆ ಹಂಚಿಕೊಂಡರು.

ರಾಜ್ಯದಲ್ಲಿನ ಎಲ್ಲ ಕೈಗಾರಿಕೆಗಳ ಸಮೀೆ ಮಾಡಿಸಿ ಕನ್ನಡಿಗರಿಗೆ ಉದ್ಯೋಗ ನೀಡಿರುವ ಮಾಹಿತಿ ಸಂಗ್ರಹಿಸಿ, ಪ್ರಾತಿನಿಧ್ಯದ ವಸ್ತುಸ್ಥಿತಿ ಪರಾಮರ್ಶೆ ಮಾಡಲಾಗುವುದು. ಡಾ.ಸರೋಜಿನಿ ಮಹಿಷಿ ವರದಿ ಶೇ.100ರಷ್ಟು ಜಾರಿಗೆ ಬಂದಿದೆ. ಖಾಸಗಿ ರಂಗದಲ್ಲೂ ಕನ್ನಡಿಗರಿಗೆ ಶೇ.85ರಷ್ಟು ಪ್ರಾಶಸ ನೀಡಬೇಕೆಂಬ ಮಹಿಷಿ ವರದಿಯನ್ನು ಸರ್ಕಾರ ಚಾಚೂ ತಪ್ಪದೇ ಪಾಲಿಸಿದೆ. ಸ್ಥಳಿಯರಿಗೆ ಆದ್ಯತೆ ನೀಡಿದ್ದಕ್ಕಾಗಿ ಕೈಗಾರಿಕೆ ವಲಯಕ್ಕೆ ಸಬ್ಸಿಡಿ ಸೇರಿದಂತೆ ಅನೇಕ ರಿಯಾಯಿತಿ, ಸವಲತ್ತುಗಳನ್ನು ಕಲ್ಪಿಸಿದೆ. ಕೈಗಾರಿಕೆಗಳು ಕನ್ನಡಿಗರಿಗೆ ಶೇ.85ರಷ್ಟು ಹುದ್ದೆಗಳನ್ನು ನೀಡಿರುವುದನ್ನು ಖಾತರಿಪಡಿಸಿಕೊಳ್ಳುವುದು ಆಡಿಟ್​ನ ಮುಖ್ಯ ಉದ್ದೇಶವಾಗಿದೆ. ತಪಾಸಣಾ ವರದಿ ಕೈಸೇರಿದ ಬಳಿಕ ಪರಿಶೀಲಿಸಲಾಗುವುದು. ಆದೇಶ ಉಲ್ಲಂಘಿಸಿರುವುದು ಕಂಡುಬಂದರೆ ಅಂತಹ ಕೈಗಾರಿಕೆಗಳಿಗೆ ನೀಡಿದ ಸಬ್ಸಿಡಿ, ಇನ್ನಿತರ ಸವಲತ್ತು ಗಳನ್ನು ಮುಲಾಜಿಲ್ಲದೆ ಕಡಿತಗೊಳಿಸ ಲಾಗುವುದು.

ಅತಿವೇಗದ ರೈಲು, ಲಂಡನ್​ನಲ್ಲಿ ರಾಜ್ಯದ ಹಿರಿಮೆ ಅನಾವರಣ

ಜಪಾನ್​ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ನೆರವಿನಿಂದ ಹೈಸ್ಪೀಡ್​ ರೈಲು ಸೌಲಭ್ಯ ಕಲ್ಪಿಸುವ ಗುರಿಯಿದೆ. ಮೊದಲ ಹಂತದಲ್ಲಿ ಬೆಂಗಳೂರು&ಮೈಸೂರು ಮಾರ್ಗ ಅನುಷ್ಠಾನಕ್ಕೆ ಬರಲಿದ್ದು, ಈ ವ್ಯವಸ್ಥೆಯಾದರೆ ಬೆಂಗಳೂರಿನಿಂದ ಕೇವಲ 40 ನಿಮಿಷಗಳಲ್ಲಿ ಮೈಸೂರಿಗೆ ತಲುಪಬಹುದಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್​ ನಿರಾಣಿ ತಿಳಿಸಿದರು. ಹೈಸ್ಪೀಡ್​ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧಿನ ಮಾಡಿಕೊಂಡು ಹಸ್ತಾಂತರಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಉಳಿದ ಕೆಲಸ ಜೈಕಾ ನಿಭಾಯಿಸುತ್ತದೆ. ನಂತರದ ಹಂತದಲ್ಲಿ ಹುಬ್ಬಳ್ಳಿ, ಕಲಬುರಗಿಗೆ ಈ ಸೌಲಭ್ಯ ವಿಸ್ತರಣೆಯಾಗಲಿದೆ.

ಸೆಮಿ ಕಂಡಕ್ಟರ್​ ನೀತಿ: ಎಲೆಕ್ಟ್ರಿಕಲ್​ ವಾಹನಗಳ ಬಳಕೆ ಪ್ರವೃತ್ತಿಗೆ ಒತ್ತಾಸೆ ನೀಡಲು ಉದ್ದೇಶಿತ "ಸೆಮಿ ಕಂಡಕ್ಟರ್​' ನೀತಿ ಜಾರಿಗೊಳಿಸುವ ಚಿಂತನೆಯಿದೆ. ಮೂರು ತಿಂಗಳೊಳಗೆ ನೀತಿ ಸಿದ್ಧವಾಗಲಿದೆ ಎಂದರು. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯಮ&ವಹಿವಾಟು ವಿಸ್ತರಣೆ ಭಾಗವಾಗಿ "ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆ ರೂಪುಗೊಂಡಿದೆ. ಮಹಿಳಾ ಉದ್ಯಮ ಪಾರ್ಕ್​, ಾರ್ಮಾ ಪಾರ್ಕ್​, ಜವಳಿ ಪಾರ್ಕ್​ ಮುಂತಾದವು ಮೂರು ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.

ಹೂಡಿಕೆ ನಿರೀಕ್ಷೆ: ಬೆಂಗಳೂರಿನಲ್ಲಿ 2022ರ ನವೆಂಬರ್​ನಲ್ಲಿ ನಡೆಯಲಿರುವ "ಇನ್ವೆಸ್ಟ್​ ಕರ್ನಾಟಕ' ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಿಂದ 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ನಿರೀೆಯಿಟ್ಟುಕೊಳ್ಳಲಾಗಿದೆ. ಇದಕ್ಕಾಗಿ 50,000 ಎಕರೆ ಲ್ಯಾಂಡ್​ ಬ್ಯಾಂಕ್​ ವ್ಯವಸ್ಥೆ ಮಾಡಬೇಕೆಂದಿದ್ದು, ಉಪ ಉತ್ಪನ್ನಗಳ ತಯಾರಿಕೆಗೆ ಉತ್ತೇಜಿಸಲು ನಿಯಮಗಳ ಸಡಿಲಿಕೆ, ಭೂ ವಿಕ್ರಯ ಸರಳೀಕರಣ ಕ್ರಮವಹಿಸಲಾಗಿದೆ ಎಂದು ಮುರುಗೇಶ್​ ನಿರಾಣಿ ವಿವರಿಸಿದರು.

ಲಂಡನ್​ನಲ್ಲಿ ಎಕ್ಸ್​ಪೋ

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಗಳ ಹಿರಿಮೆ, ಮಹತ್ವವನ್ನು ಬಿಂಬಿಸಿ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಲಂಡನ್​ನಲ್ಲಿ ನಡೆಯಲಿರುವ ವಿಶ್ವ ಪ್ರದರ್ಶನ ಮೇಳದಲ್ಲಿ ಕರ್ನಾಟಕ ಪಾಲ್ಗೊಳ್ಳಲಿದೆ ಎಂದು ಪ್ರವಾಸೋದ್ಯಮ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮಹಲಿಂಗಯ್ಯ ತಿಳಿಸಿದರು. ಮಾನವ&ಪ್ರಾಣಿ ಮಧ್ಯೆ ಸಂರ್ಷ ತಪ್ಪಿಸಲು ಅರಣ್ಯ ಪ್ರದೇಶದ ಸಂರಕ್ಷಣೆ, ಪ್ರಸ್ತಾವಿತ ಯೋಜನೆಗಳ ತ್ವರಿತ ಅನುಷ್ಠಾನ ಹಾಗೂ ಅರಣ್ಯಾಭಿವೃದ್ಧಿಗೂ ಆದ್ಯತೆ ಅಗತ್ಯವೆಂದು ನಟಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯೆ ತಾರಾ ಅನುರಾಧ ಹೇಳಿದರು.

ದುಬೈ ಎಕ್ಸ್​ಪೋ ಅನುಭವ

ದುಬೈ ಎಕ್ಸ್​ಪೋನಲ್ಲಿ ಭಾಗಿಯಾದ ವೇಳೆ ಆ ಪುಟ್ಟ ದೇಶ ಉದ್ಯಮ&ವಹಿವಾಟು, ಪ್ರವಾಸ ಕ್ಷೇತ್ರದಲ್ಲಿ ದೈತ್ಯಶಕ್ತಿಯಾಗಿ ಬೆಳೆದಿರುವುದು ಗಮನಕ್ಕೆ ಬಂತು. ಈ ಬೆಳವಣಿಗೆಯಲ್ಲಿ ಭಾರತದ ಅದರಲ್ಲೂ ಕರ್ನಾಟಕದ ಪ್ರತಿಭೆಗಳ ಕೊಡುಗೆ ದೊಡ್ಡದು. ಕರ್ನಾಟಕ ಮೂಲದ ಯುವ ಇಂಜಿನಿ ಯರ್​ ಸ್ಟಾರ್ಟಪ್​ ಪ್ರಾರಂಭಿಸಿ ಕೇವಲ 1.50 ಕೋಟಿ ರೂ. ವೆಚ್ಚದಲ್ಲಿ ಉಪಗ್ರಹವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಅಂತಹ ಪ್ರತಿಭೆಗಳು ಸ್ಟಾರ್ಟಪ್​ ಸ್ಥಾಪಿಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಶೇ.10ರಷ್ಟು ಜಮೀನು ಕಾದಿರಿಸುವ ಯೋಚನೆಯಿದೆ.

ಕೈಗಾರಿಕೆಯಲ್ಲಿ ರಾಜ್ಯದ ಸಾಮರ್ಥ್ಯ ಅನಾವರಣ

ಸಬಲೀಕರಣಕ್ಕೆ ಆದ್ಯತೆ: ಬದಲಾದ ಪರಿಸ್ಥಿತಿ, ಕೇಂದ್ರ ಸರ್ಕಾರದ ನೀತಿಗೆ ಅನುಗುಣವಾಗಿ ರೋಗಗ್ರಸ್ತ ಸಾರ್ವಜನಿಕ ಉದ್ಯಮಗಳನ್ನು ಪುನಶ್ಚೇತನಗೊಳಿಸಿ, ಕಾರ್ಯ ಮತ್ತು ಪಾಲನೆಯನ್ನು ಖಾಸಗಿಗೆ ಗುತ್ತಿಗೆ ನೀಡುವ ಚಿಂತನೆಯಿದೆ. ಉದ್ಯಮಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ. ಇವುಗಳ ನಿರ್ವಹಣೆಗೆ ಖಾಸಗಿ ವಲಯ ಈಗ ಸಮರ್ಥವಾಗಿದೆ. ಪುನರುಜ್ಜೀವನಗೊಳಿಸಿ ಖಾಸಗಿಗೆ ಗುತ್ತಿಗೆ ನೀಡಬೇಕೆಂದು ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದ್ದು, ಅದರಂತೆಯೇ ಸರ್ಕಾರ ಸಾಗಲಿದೆ.

ಕಲಬುರಗಿಗೆ ಇಸ್ರೇಲ್​ ತಜ್ಞರ ತಂಡ: ಕಲಬುರಗಿ ಮುನ್ನೋಟ&2050ರ ಭಾಗವಾಗಿ ಇಸ್ರೇಲ್​ ಮಾದರಿ ಕೃಷಿ ಪ್ರಾಯೋಗಿಕ ಅನುಷ್ಠಾನಕ್ಕೆ 1,000 ಎಕರೆ ಜಮೀನು ಗುರುತಿಸಲಾಗಿದೆ. ಕಡಿಮೆ ನೀರು, ಖರ್ಚಿನಲ್ಲಿ ಹೆಚ್ಚು ಉತ್ಪಾದನೆ, ಬಹು ವಾರ್ಷಿಕ ಬೆಳೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸಮರ್ಪಕ ಬಳಕೆ ಇಸ್ರೇಲ್​ ಮಾದರಿ ತಿರುಳು. ಈ ವಿಧಾನವನ್ನು ಕಲಬುರಗಿ ಜಿಲ್ಲೆಯ ರೈತರಿಗೆ ತಿಳಿಸಿಕೊಟ್ಟು, ತರಬೇತಿ ನೀಡಲು ಇಸ್ರೇಲ್​ ತಜ್ಞರ ತಂಡ ಒಪ್ಪಿಕೊಂಡಿದೆ.

ಕೈಗಾರಿಕಾಸ್ನೇಹಿ ವಾತಾವರಣ

ಗುಜರಾತ್​ಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೈಗಾರಿಕೆಗೆ ಹೆಚ್ಚು ಪೂರಕ ವಾತಾವರಣವಿದೆ. ಆದರೆ, ಪ್ರಚಾರದ ಕೊರತೆಯಿಂದ ಕರ್ನಾಟಕದ ಸಾಮರ್ಥ್ಯ ಸರಿಯಾಗಿ ಬಿಂಬಿತವಾಗಿಲ್ಲ.

ಮೈಸೂರು ಅರಸರು ಮಾದರಿ

ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ರೋಲ್​ ಮಾಡೆಲ್​ ಆಗಿದ್ದಾರೆ. ಜನರ ಹಿತಕ್ಕಾಗಿ ಅವರು ಕೆಆರ್​ಎಸ್​ ಅಣೆಕಟ್ಟೆ, ನೀರಾವರಿ ಸೌಲಭ್ಯ, ಮೂಲ ಸವಲತ್ತು ಕಲ್ಪಿಸಿದರು. ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕೈಗಾರಿಕಾ ಸಮೂಹ ಕಟ್ಟಿ ಬೆಳೆಸಿದ್ದಲ್ಲದೆ ಆತಿಥ್ಯ ಕ್ಷೇತ್ರ, ಪ್ರವಾಸೋದ್ಯಮ, ರ್ತು ವಹಿವಾಟಿಗೆ ಪ್ರೋತ್ಸಾಹಿಸಿದರು. ಮೈಸೂರು ಅರಸರನ್ನೇ ಆದರ್ಶವಾಗಿಟ್ಟುಕೊಂಡು ಬೀಳಗಿ ಕ್ಷೇತ್ರದಲ್ಲಿ ಎರಡು ಬ್ರಿಡ್ಜ್​ ಕಮ್​ ಬ್ಯಾರೇಜ್​ ಕಟ್ಟಿಸಿ ಮೂರು ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಒದಗಿಸಿದ್ದೇನೆ. ಮೂಲ ಸವಲತ್ತು ಅಭಿವೃದ್ಧಿಪಡಿಸಿದ್ದು, ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕೈಗಾರಿಕಾ ಸಮೂಹವನ್ನು ಕಟ್ಟಿ ಬೆಳೆಸಿರುವೆ. ಬೀಳಗಿ ಕ್ಷೇತ್ರದಲ್ಲಿ ಸಾಧ್ಯವಾಗಿದ್ದು ಇಡೀ ರಾಜ್ಯಕ್ಕೆ ವಿಸ್ತರಿಸಲು ಸಾಧ್ಯವಿಲ್ಲವೇಕೆ ಎಂಬ ಪ್ರಶ್ನೆ ಬಹುವಾಗಿ ಕಾಡಿದ್ದರ ಲವಾಗಿ "ಕಲಬುರಗಿ ಜಿಲ್ಲೆ ಮುನ್ನೋಟ&2050' ಮೈದಳೆದಿದೆ. ಮುಂದಿನ ಹಂತದಲ್ಲಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಂಡಿರುವೆ.

ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ರಾಜ್ಯದ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ತಲೆ ಎತ್ತಲಿದೆ. ಇದಕ್ಕಾಗಿ 3,000 ಎಕರೆ ಭೂಮಿಯನ್ನು ಗುರುತಿಸಿ ಸ್ವಾಧಿನ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಮುಂದಿನ ಹಂತದ ಕೆಲಸಗಳಿಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಜತೆಗೆ ಮಾತುಕತೆ, ಸ್ಥಳ ತಪಾಸಣೆ ಹಾಗೂ ಇತರ ಕ್ರಮಗಳತ್ತ ಸರ್ಕಾರ ಗಮನಹರಿಸಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ಈಗಾಗಲೇ ಮೈಸೂರು, ಹುಬ್ಬಳ್ಳಿ, ಕಲಬುರಗಿ, ಬೀದರ್​, ಬೆಳಗಾವಿಯಲ್ಲಿ ವಿಮಾನ ನಿಲ್ದಾಣಗಳಿವೆ. ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಖಾಸಗಿ ವಿಮಾಣ ನಿಲ್ದಾಣಗಳಿದ್ದರೆ, ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿವೆ.

ಯುವಕರಿಗೆ ತರಬೇತಿ

"ಉದ್ಯಮಿಯಾಗು ಉದ್ಯೋಗ ನೀಡು' ಪರಿಕಲ್ಪನೆಯಡಿ ವಿಭಾಗ ವಾರು ಸಮಾವೇಶ, ಕೈಗಾರಿಕಾ ಅದಾಲತ್​ಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದ್ದು, ನವೆಂಬರ್​ 11 ಮತ್ತು 12ರಂದು ಕಲಬುರಗಿ ವಿಭಾಗದ ಕಾರ್ಯಕ್ರಮ ನಡೆಯಲಿದೆ. ಉದ್ಯಮಿಯಾಗಲು ಬಯಸುವವರಿಗೆ ಕೇಂದ್ರ&ರಾಜ್ಯ ಸರ್ಕಾರದ ಸವಲತ್ತುಗಳ ಮಾಹಿತಿ, ಬ್ಯಾಂಕ್​ ಸಾಲ ಪಡೆಯುವ ರೀತಿ, ವಿಸತ ಯೋಜನಾ ವರದಿ ತಯಾರಿಕೆ, ಕಾರ್ಯಯೋಜನೆ ಇತ್ಯಾದಿಗಳ ತರಬೇತಿ ನೀಡಲಿದ್ದು, ಮುಂದಿನ 2 ತಿಂಗಳಲ್ಲಿ 50 ಸಾವಿರ ಪದವೀಧರ ಯುವ ಸಮೂಹಕ್ಕೆ ಈ ಅವಕಾಶ ಕಲ್ಪಿಸುವ ಉದ್ದೇಶವಿದೆ.