ಹುಬ್ಬಳ್ಳಿ: ಇಲ್ಲಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ 29ನೇ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ಸವಾಯಿ ಗಂಧರ್ವ ಹಾಲ್ ನಲ್ಲಿ ಶಿಶಿರ ಶಿಲ್ಪ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಲಾ ಕೇಂದ್ರದಿಂದ ಕೊಡಮಾಡುವ ರವಿ ದಾತಾರ್ ಪ್ರಶಸ್ತಿಯನ್ನು ತುಮಕೂರಿನ ವಿದ್ವಾನ್ ಡಾ. ಸಾಗರ ಟಿ.ಎಸ್. ಅವರಿಗೆ ನೀಡಿ ಗೌರವಿಸಲಾಯಿತು.
ಡಾ. ಸಹನಾ ಭಟ್ಟ ಹಾಗೂ ತಂಡದವರು ಭರತನಾಟ್ಯ ಪ್ರದರ್ಶಿಸಿದರು. ಪ್ರದೀಪ ಭಟ್ಟ, ಶಶಿಧರ ನರೇಂದ್ರ, ಶಿವರಾಮ ಹೆಗಡೆ, ಸತೀಶ ಮೂರೂರು ಇತರರು ಇದ್ದರು.