ಮೈಸೂರು: ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರ ಹಾಗೂ ನಾಟ್ಯಾಂಜಲಿ ವತಿಯಿಂದ ಜ.7ರ ಸಂಜೆ 6 ಗಂಟೆಗೆ ಕುವೆಂಪುನಗರದ ರಮಾಗೋವಿಂದ ಕಲಾ ವೇದಿಕೆ ಗಾನಭಾರತಿಯಲ್ಲಿ ‘ನಾಟ್ಯ ಮಾರ್ಗಂ’ ಎಂಬ ಕಾರ್ಯಕ್ರಮದಲ್ಲಿ ಯುಎಸ್‌ಎಯ ಪ್ರತಿಭಾವಂತ ನೃತ್ಯಗಾರರು ನೃತ್ಯ ಪ್ರದರ್ಶನ ಮಾಡಲಿದ್ದಾರೆ.
ಅಮೆರಿಕದ ವಿದುಷಿ ಬಾನ ಶಾಸ್ತ್ರಿ ರಾಮನಾಥ್ ಅವರ ಪ್ರತಿಭಾನ್ವಿತ ಶಿಷ್ಯರಾದ ವಿದುಷಿ ಅನುಪ್ರಿಯ ಜೋಸ್, ವಿದುಷಿ ಶ್ರುತಿ ಸುಬ್ರಮಣಿಯನ್, ವಿದುಷಿ ತಪಸ್ವಿನಿ ಪರಾಳ್ಕರ್ ನೃತ್ಯ ಪ್ರಸ್ತುತಿ ಇದೆ.