ಚಳ್ಳಕೆರೆ: ವಿಶ್ವಕರ್ಮ ಜಗದ ಸೃಷ್ಟಿಯ ಸ್ವರೂಪ ಉಳ್ಳ ಮಹಾನ್ ಸಾಧಕ ಎಂದು ಶಾಸಕ ಟಿ.ರಘುಮೂರ್ತಿ ಬಣ್ಣಿಸಿದರು.
ತಾಲೂಕು ಆಡಳಿತದಿಂದ ತಹಸೀಲ್ದಾರ್ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಿಶ್ವಕರ್ಮ ಸಮುದಾಯ ಶ್ರಮಿಕ ವರ್ಗ. ಶ್ರಮ ಪಟ್ಟು ಕಸುಬುದಾರಿಕೆಯಲ್ಲಿ ಜೀವನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದೆ. ಬದಲಾಗುತ್ತಿರುವ ವ್ಯವಹಾರಗಳ ನಡುವೆ ಕುಲಕಸುಬುಗಳ ವೃತ್ತಿ ಜೀವನಕ್ಕೆ ಆಧಾರವಾಗುತ್ತಿಲ್ಲ. ಶೈಕ್ಷಣಿಕವಾಗಿ ಪ್ರಗತಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ವಿಶ್ವಕರ್ಮ ಸಂಘದ ಮಹಿಳಾ ಘಟಕದ ಗೌರವಾಧ್ಯಕ್ಷೆ ಎಂ.ಸರಸ್ವತಮ್ಮ ಮಾತನಾಡಿ, ಸೂರ್ಯದೇವನ ಒಂದು ಅಂಶವಾಗಿ ವಿಶ್ವಕರ್ಮ ಜನಿಸಿದವನು. ನೆಲಮೂಲದ ದೇವಾನುದೇವತೆಗಳು ಸೇರಿ ಶಿವನಿಗೂ ಅರಮನೆ ಕಟ್ಟಿಕೊಟ್ಟ ವಿಶ್ವಕರ್ಮ ದೈವಸಂಭೂತ ಎಂದರು.
ತಹಸೀಲ್ದಾರ್ ರೇಹಾನ್ ಪಾಷಾ, ಪೌರಾಯುಕ್ತ ಸಿ. ಚಂದ್ರಪ್ಪ, ಪೊಲೀಸ್ ಉಪಅಧೀಕ್ಷಕ ಟಿ.ಬಿ. ರಾಜಣ್ಣ, ಪಿಎಸ್‌ಐ ಕೆ. ಸತೀಶ್‌ನಾಯಕ, ನಗರಸಭಾ ಸದಸ್ಯರಾದ ಕೆ. ವೀರಭದ್ರಯ್ಯ, ಟಿ. ಮಲ್ಲಿಕಾರ್ಜುನ, ಕವಿತಾ, ಸುಜಾತಾ, ಸುಮಾ, ಮುಖಂಡರಾದ ಜಯವೀರಚಾರಿ, ಏಕಾಂತಚಾರ್, ವೈ.ಆರ್.ವಸಂತಚಾರ್, ಆರ್.ಶ್ರೀನಿವಾಸಚಾರ್, ಸಿ. ವೆಂಕಟೇಶ್, ಸಿ.ವಿ. ಪ್ರಸನ್ನ, ಆರ್. ಕಮಲಮ್ಮ, ಸಿ.ಪಿ. ಉಮಾದೇವಿ, ಎಸ್. ರಾಜೇಶ್ವರಿ, ಬಿ.ಕೆ.ಸುಜಾತಾ, ಕೆ. ಶಿವಮ್ಮ, ಪಿ. ಕವಿತಾ, ಎಚ್. ಸುಮಾ ಮತ್ತಿತರರು ಇದ್ದರು.