ಹುನಗುಂದ: ಮನುಷ್ಯ ಪ್ರಕೃತಿಯ ಸರ್ವನಾಶಕ್ಕೆ ಕಾರಣವಾಗುತ್ತಿದ್ದಾನೆ ಎಂದು ಮುಖ್ಯಶಿಕ್ಷಕ ಎಸ್.ಎಚ್. ಮೇಟಿ ಹೇಳಿದರು.
ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಇಕೋ ಕ್ಲಬ್ ಕಾರ್ಯಕ್ರಮದಡಿ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಜಾಗೃತಿ ಜಾಥಾ ಅಭಿಯಾನದಲ್ಲಿ ಮಾತನಾಡಿದ ಅವರು, ಮುನುಷ್ಯ ಮರಗಿಡಗಳನ್ನು ಕಡಿದು ಕಾಡಿನ ಪ್ರಮಾಣ ಕಡಿಮೆ ಮಾಡುತ್ತಿರುವುದರ ಪರಿಣಾಮ ತಾಪಮಾನ ಹೆಚ್ಚಾಗುತ್ತಿದೆ ಎಂದರು.
ಪರಿಸರ ಸಂರಕ್ಷಣೆಯ ಕುರಿತು ಶಿಕ್ಷಕ ಯು.ವಿ. ಮಾಲಗತ್ತಿ ಉಪನ್ಯಾಸ ನೀಡಿದರು.
ಶಿಕ್ಷಕರಾದ ಡಿ.ಎಂ. ಬಾಗವಾನ, ಎಲ್.ವೈ.ಗುಂಡಿನಮನಿ, ಶಿಕ್ಷಕ ಬಿ.ಕೆ.ವಿರಕ್ತಮಠ, ಆರ್.ಎಂ ಚಿಕ್ಕಮಠ, ಗಿರಿಜಾ ಗೀತಾ ಪದಕಿಮಠ ಇದ್ದರು.