ಕೌಜಲಗಿ: ಪಟ್ಟಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಆರಂಭಿಸುವಂತೆ ಒತ್ತಾಯಿಸಿ ಕೌಜಲಗಿ ಮುಖಂಡರು ಕುಲಗೋಡ ಗ್ರಾಮದಲ್ಲಿ ಸಂಸದ ಜಗದೀಶ ಶೆಟ್ಟರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
25 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಕೌಜಲಗಿ ಹೋಬಳಿ ಕೇಂದ್ರವಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಅಲ್ಲದೆ, ನೂರಾರು ವಾಣಿಜ್ಯ ಮಳಿಗೆ ಒಳಗೊಂಡು ನಿತ್ಯ ಲಾಂತರ ರೂ. ವ್ಯಾಪಾರ&ವಹಿವಾಟು ನಡೆಯುತ್ತದೆ. ಈ ಬಗ್ಗೆ ಶಾಸಕರು ಹಾಗೂ ಹಿಂದಿನ ಸಂಸದರಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಶ್ರೀವೇ ಕೌಜಲಗಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಸಂಸದ ಶೆಟ್ಟರ್, ಈ ಬಗ್ಗೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೌಜಲಗಿಗೆ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಆರಂಭಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಅಜಯ ಲೋಕಣ್ಣವರ, ಬಸವರಾಜ ಹಿರೇಮಠ, ರಮೇಶ ಮಾಳಿ, ದಿನೇಶ ಪಟ್ಟಣಶೆಟ್ಟಿ, ವಿಜಯ ಲೋಕಣ್ಣವರ, ಅರವಿಂದ ಸೊಗಲದ, ರಮೇಶ ಇಟ್ನಾಳ, ಮನೋಜ ಕೇರುಶೆಟ್ಟಿ ಇತರರಿದ್ದರು.