ಜಿಲ್ಲೆ

ನಿರ೦ತರ ಅಧ್ಯಯನದಿಂದ ಸಾಧನೆ ಸರಳ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೆಟ್, ಕೆ-ಸೆಟ್ ಹಾಗೂ ಗೇಟ್‌ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಅರಿತುಕೊಳ್ಳಬೇಕು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಪೂರ್ಣ ಅಧ್ಯಯನ ಕೈಗೊಂಡರೆ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬಹುದು. ನಿರಂತರ ಅಧ್ಯಯನದಿಂದ ಸಾಧನೆ ಸರಳವಾಗುತ್ತದೆ ಎಂದು ಜೆಎಸ್‌ಎಸ್ ಕಾಲೇಜಿನ ಉಪ ಪ್ರಾಚಾರ್ಯ ಡಾ. ಸೂರಜ ಜೈನ್ ಹೇಳಿದರು.

ನಗರದ ಜೆ.ಎಸ್.ಎಸ್. ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗವು ನೆಟ್, ಕೆ-ಸೆಟ್ ಹಾಗೂ ಗೇಟ್ ಪರೀಕ್ಷೆಗಳ ತಯಾರಿ ಕುರಿತು ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಕಾಲೇಜಿನಲ್ಲಿ ಗ್ರಂಥಾಲಯ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಇಲ್ಲಿರುವ ಸಾವಿರಾರು ಪುಸ್ತಕಗಳ ಪ್ರಯೋಜನ ಪಡೆದುಕೊಳ್ಳಬೇಕು. ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ನಡೆಸಲಾಗುವ ಇಂತಹ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬೆ0ಗಳೂರಿನ ಕ್ರೈಸ್ಟ್ ಕಾಲೇಜಿನ ಡಾ. ಅಶೋಕ ಕೆ., ಹೈದರಾಬಾದ್‌ನ ಉಸ್ಮಾನಿಯ ವಿಶ್ವವಿದ್ಯಾಲಯದ ಡಾ. ನಾರಾಯಣ ಚಾರಿ ಹಾಗೂ ಬಾಗಲಕೋಟೆಯ ನವನಗರದ ಸರ್ಕಾರಿ ಪದವಿ ಕಾಲೇಜಿನ ಸಚಿನ್ ಕುಲಕರ್ಣಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಗಣಿತಶಾಸ್ತçದ ವಿಶೇಷ ತಂತ್ರಗಳು, ವಿಷಯ ವಿಶ್ಲೇಷಣೆಗಳ ಬಗ್ಗೆ ಉಪನ್ಯಾಸ ನೀಡಿದರು.

ಸಂಯೋಜಕ ಡಾ. ಶಶಿಕಾಂತ್, ಡಾ. ಜ್ಯೋತಿ ಅಕ್ಕಿ, ಡಾ. ಶಿಲ್ಪಾ ನಾಯಕ್, ಡಾ. ಮಮತಾ ಪಾಟೀಲ, ಪ್ರೊ. ತಾರಾಮತಿ ಕುಲಕರ್ಣಿ, ಪ್ರೊ. ಅಂಬಿಕಾ ಪತ್ತಾರ ಹಾಗೂ ವಿದ್ಯಾರ್ಥಿಗಳಿದ್ದರು.

ಪದ್ಮಾವತಿ ವಂಟಗೊಡಿ ಹಾಗೂ ತಂಡ ಪ್ರಾರ್ಥಿಸಿತು. ಡಾ. ಶಶಿಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ತಾರಾಮತಿ ಕುಲಕರ್ಣಿ ವಂದಿಸಿದರು.