ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕೆ.ಆರ್.ಸಾಗರ ಪೊಲೀಸ್ ಠಾಣೆ ಸಿಬ್ಬಂದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. 
ಜಿಲ್ಲೆ

ಕೆ.ಆರ್.ಸಾಗರದಲ್ಲಿ ರಾಷ್ಟ್ರೀಯ ಏಕತಾ ಓಟ

ಕೆ.ಆರ್.ಸಾಗರ : ಕೆ.ಆರ್. ಸಾಗರ ಪೊಲೀಸ್ ಠಾಣಾ ವೃತ್ತದ ವತಿಯಿಂದ 5 ಕಿ.ಮೀ. ರಾಷ್ಟ್ರೀಯ ಏಕತಾ ಓಟವನ್ನು ಪೊಲೀಸರು ಮತ್ತು ಸಾರ್ವಜನಿಕರಿಗೆ ಏರ್ಪಡಿಸಲಾಗಿತ್ತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕೆ.ಆರ್.ಸಾಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ರಾಷ್ಟ್ರೀಯ ಏಕತಾ ದಿವಸ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಇನ್‌ಸ್ಪೆಕ್ಟರ್ ರಮೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಪಿಎಸ್‌ಐ ರಮೇಶ್ ಕರಕಿಕಟ್ಟಿ ಏಕತಾ ದಿವಸದ ಬಗ್ಗೆ ಮಾಹಿತಿ ನೀಡಿದರು.

ನಂತರ ರಾಷ್ಟ್ರೀಯ ಏಕತಾ ಓಟಕ್ಕೆ ಚಾಲನೆ ನೀಡಲಾಯಿತು. ಓಟದಲ್ಲಿ ಸಿ.ಡಿ.ವಿಭು(ಪ್ರ), ಅರುಣ್‌ಕುಮಾರ್ (ದ್ವಿ), ರಘು (ತೃ), ವಿಜೇತರಿಗೆ ವೃತ್ತ ನಿರೀಕ್ಷಕ ವಿವೇಕಾನಂದ ಬಹುಮಾನ ವಿತರಣೆ ಮಾಡಿದರು.

ಅರಕೆರೆ ಪೊಲೀಸ್ ಠಾಣೆಯ ಪಿಎಸ್‌ಐ ವಿನಯ್, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಉಸ್ತುವಾರಿ ಅಧಿಕಾರಿ ಗೋವರ್ಧನ್, ಇನ್‌ಸ್ಪೆಕ್ಟರ್ ರಮೇಶ್ ಪಿಎಸ್‌ಐ ಲೋಕೇಶ್, ಕೆ.ಆರ್.ಸಾಗರ ಗ್ರಾ.ಪಂ. ಸದಸ್ಯ ರವಿಕುಮಾರ್, ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಕೆ.ಆರ್.ಸಾಗರ ಶ್ರೀ ಕಾವೇರಿ ಆಟೋ ಮಾಲೀಕ ಮತ್ತು ಚಾಲಕರು, ಸಾರ್ವಜನಿಕರು, ಕೆ.ಆರ್.ಸಾಗರ ಪೊಲೀಸ್ ಠಾಣಾ ವೃತದ ಸಿಬ್ಬಂದಿ ಮತ್ತು ಕರ್ನಾಟಕ ಕೈಗಾರಿಕಾ ಭದ್ರತಾ ಸಿಬ್ಬಂದಿ, ಮುಖಂಡರು ಇತರರು ಇದ್ದರು.