ಜಿಲ್ಲೆ

ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಸಪ್ತಾಹ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಸಪ್ತಾಹ ನಗರದ ಕೆಎಂಸಿಆರ್​ಐ ಹಾಗೂ ಐಎಂಎ ಸಭಾಂಗಣದಲ್ಲಿ ಜೂ. 8 ರಿಂದ 15ರವರೆಗೆ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷೆ ಡಾ. ಶಿಲ್ಪಾ ಕುಚ್ಚನ್ನವರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 8ರಂದು ಬೆಳಗ್ಗೆ 9 ಗಂಟೆಗೆ ಕೆಎಂಸಿಆರ್​ಐನಿಂದ ತೋಳನಕೆರೆವರೆಗೆ ರ್ಯಾಲಿ, 9ರಂದು ಕೆಎಂಸಿಆರ್​ಐನಲ್ಲಿ ರಕ್ತದಾನ ಶಿಬಿರ, 10ರಂದು ವಿಹಾನ್ ಆಸ್ಪತ್ರೆಯಲ್ಲಿ ಸರ್ಜನ್ಸ್​ಗಳಿಗೆ ಉಚಿತ ಹೃದ್ರೋಗ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಸಪ್ತಾಹದ ಹಿನ್ನೆಲೆಯಲ್ಲಿ ಇಡೀ ವಾರ ವಿವಿಧ ಆಸ್ಪತ್ರೆಗಳಲ್ಲಿ ಅಗತ್ಯ ಇರುವ ಒಬ್ಬರಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದರು.

15ರಂದು ಐಎಂಎ ಸಭಾಂಗಣದಲ್ಲಿ ಸರ್ಜನ್ಸ್ ಡೇ ಕಾರ್ಯಕ್ರಮ ಆಯೋಜಿಸಲಾಗಿದೆ. ಹುಬ್ಬಳ್ಳಿ-ಧಾರವಾಡದ ಐವರು ಹಿರಿಯ ಸರ್ಜನ್​ಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಡಾ. ಈಶ್ವರ ಹೊಸಮನಿ, ಡಾ. ಸಂಧ್ಯಾ ಎನ್., ಡಾ. ರಶ್ಮಿ ಮಾನೆ ಸುದ್ದಿಗೋಷ್ಠಿಯಲ್ಲಿ ಇದ್ದರು.