ಮಸ್ಕಿಯಲ್ಲಿ ಬಣ್ಣದಾಟವಾಡಿ ಸಂಭ್ರಮಿಸದ ಜನ.  
ಜಿಲ್ಲೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಚರಣೆ

ರುದ್ರಪ್ಪ ವಾಲಿ

ಮಸ್ಕಿ: ಪಟ್ಟಣದಲ್ಲಿ ಯುಗಾದಿ ನಿಮಿತ್ತ ಚಿಣ್ಣರು ಹಾಗೂ ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಭಾನುವಾರ ಸಂಭ್ರಮಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೋಳಿ ಹುಣ್ಣಿಮೆಗೆ ಬಣ್ಣ ಆಡುವ ಪರಿಪಾಠವಿದ್ದು, ಮಸ್ಕಿ ಪಟ್ಟಣದಲ್ಲಿ ಯುಗಾದಿ ಹಬ್ಬದ ಮರುದಿನ ಬಣ್ಣ ಆಡುವ ಪರಿಪಾಠ ಮೊದಲಿನಿಂದಲು ಬೆಳೆದುಕೊಂಡು ಬಂದಿದೆ.

ಯುವಕರು ತಂಡ ತಂಡವಾಗಿ ಗಲ್ಲಿಗಲ್ಲಿಗಳಲ್ಲಿ ನಾ ಮುಂದು ನೀ ಮುಂದು ಎಂದು ಬಣ್ಣದಾಟವಾಡಿದರು. ಪಟ್ಟಣದ ದೈವದಕಟ್ಟೆ, ಕನಕವೃತ್ತ, ಹಳೇಬಸ್ ನಿಲ್ದಾಣದ ಬಳಿ, ಸಂತೇಬಜಾರ್ ಮತ್ತು ಅಶೋಕ ವೃತ್ತದ ಹತ್ತಿರ ಯುವಕರು ಬಣ್ಣ ಆಡುವ ದೃಶ್ಯ ಕಂಡುಬಂತು. ರಾಷ್ಟ್ರೀಯ ಸ್ವಯಂ ಸೇವಕ ಯುವಕರು ಬಣ್ಣದ ಆಟ ಆಡಿ ಭಾರತ ಮಾತಾಕೀ ಜೈ ಎಂಬ ಉದ್ಘೋಷಣಗಳನ್ನು ಕೂಗಿ ಸಂಭ್ರಮಿಸಿದರು.