ಘಾಳಪೂಜಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಲಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. 
ಜಿಲ್ಲೆ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ದತ್ತಾತ್ರೇಯ ಪಿ ಕುಲಕರ್ಣಿ

ನಾಲತವಾಡ: ಹೋಬಳಿಯ ವಿವಿಧ ಶಾಲೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.

ರಕ್ಕಸಗಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ರೇಣುಕಾ ಹಿರೇಮಠ ಹಾಗೂ ವಿಜ್ಞಾನ ಶಿಕ್ಷಕಿ ಬಸಮ್ಮ ಟಕ್ಕಳಕಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಉದ್ಘಾಟಿಸಿದರು.

ಟಕ್ಕಳಕಿ ಶಾಲೆಯಲಿ ವಿದ್ಯಾರ್ಥಿಗಳು ಶಿಕ್ಷಕ ಮಹಾಂತೇಶ ಮುದ್ದೇಬಿಹಾಳ ನೇತೃತ್ವದಲ್ಲಿ ವೈಜ್ಞಾನಿಕ ಮಾದರಿಗಳನ್ನು ನಿರ್ಮಿಸಿ, ಅವುಗಳ ಕಾರ್ಯವಿಧಾನ ವಿವರಿಸಿದರು. ಬಿಜ್ಜೂರ ಮಾದರಿ ಶಾಲೆಯಲ್ಲಿ ವಿದ್ಯಾರ್ಥಿ ತಂಡಗಳ ಪ್ರಾತ್ಯಕ್ಷಿಕೆಗಳನ್ನು ಮುಖ್ಯಶಿಕ್ಷಕ ಅಶೋಕ ನರಸಲಗಿ ಉದ್ಘಾಟಿಸಿದರು.

ಬಂಗಾರಗುಂಡ ಹಾಗೂ ಹುನಕುಂಟಿ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾದ ಮಂಜುನಾಥ, ಸಾವಿತ್ರಿ ಟಕ್ಕಳಕಿ ವಿಜ್ಞಾನ ದಿನದ ಮಹತ್ವವನ್ನು ವಿವರಿಸಿದರು. ಮುಖ್ಯಶಿಕ್ಷಕ ಎಸ್.ಎಚ್.ವಾಲಿಕಾರ ಇದ್ದರು.

ಘಾಳಪೂಜಿ, ನಾಲತವಾಡದ ದೇಶಮುಖರ ಓಣಿ ಶಾಲೆ, ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿಜ್ಞಾನ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.