ಎಲ್.ಮಂಜುಳಾ 
ಜಿಲ್ಲೆ

ರಾಷ್ಟ್ರೀಯ ಪ್ಯಾರಾ ಸಿಟಿಂಗ್ ಥ್ರೋಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆ

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ಜಾರ್ಖಂಡ್‌ನ ರಾಂಚಿ ಖೇಲ್‌ಗಾಂವ್‌ನಲ್ಲಿ ಸೆ.21ರಿಂದ ಮೂರು ನಡೆಯಲಿರುವ ರಾಷ್ಟ್ರೀಯ ಪ್ಯಾರಾ ಸಿಟಿಂಗ್ ಥ್ರೋಬಾಲ್ ಚಾಂಪಿಯನ್‌ಷಿಪ್‌ಗೆ ಹಂಪಾಪಟ್ಟಣ ಗ್ರಾಪಂ ವ್ಯಾಪ್ತಿಯ ವ್ಯಾಸಪುರ ತಾಂಡಾದ ಎಲ್.ಮಂಜುಳಾ ಆಯ್ಕೆಯಾಗಿದ್ದಾರೆ.

ಈ ಕುರಿತು ಮಂಜುಳಾ ಅವರು ಮಾತನಾಡಿ, ಫೇಸ್ಬುಕ್‌ನಲ್ಲಿ ಅಂಗವಿಕಲರಿಗಾಗಿ ಸಿಟಿಂಗ್ ಥ್ರೋಬಾಲ್ ತರಬೇತಿ ಇರುವ ಬಗ್ಗೆ ಪ್ಯಾರಾ ಥ್ರೋಬಾಲ್ ಫೆಡೆರೇಷನ್ ಆಫ್ ಇಂಡಿಯಾ ಪ್ರಕಟಣೆ ಕಂಡುಬಂತು. ಈ ಕುರಿತು ಥ್ರೋಬಾಲ್ ತಂಡದ ರೇಣುಕಮ್ಮ ಅವರನ್ನು ಸಂಪರ್ಕಿಸಿದಾಗ ಬೆಂಗಳೂರಿನಲ್ಲಿ ತರಬೇತಿ ಇರುವ ಬಗ್ಗೆ ತಿಳಿಸಿದರು. ಅಲ್ಲಿ ಕೆಲ ಅಭ್ಯಾಸ ಮಾಡಿ ತಮಿಳುನಾಡಿನ ಕೊಯಾಮತ್ತೂರಿನಲ್ಲಿ ಆಯೋಜಿಸಿದ್ದ ಕ್ರೀಡೆಗೆ ಆಯ್ಕೆಯಾದೆವು.

ಬಳಿಕ ಕರ್ನಾಟಕ ತಂಡದಲ್ಲಿ ವಿಜಯನಗರ ಜಿಲ್ಲೆಯಿಂದ ನಾನು ಆಯ್ಕೆಯಾದೆ. 4ನೇ ಸೌತ್ ಝೋನ್ ನ್ಯಾಷನಲ್ ಪ್ಯಾರಾ ಸಿಟಿಂಗ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ 3ನೇ ಸ್ಥಾನದಲ್ಲಿ ಗೆಲ್ಲುವ ಮೂಲಕ ಬಹುಮಾನ ಪಡೆಯಿತು. ಈಗ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಖಷಿಯಾಗಿದೆ ಎಂದು ತಿಳಿಸಿದರು.