ಮಂಗಳೂರು: ರಾಷ್ಟ್ರೀಯ ನವಜಾತ ಶಿಶು ಆರೈಕೆ ಸಪ್ತಾಹದ ಅಂಗವಾಗಿ ಅದಾನಿ ಫೌಂಡೇಶನ್‌ನ ಸುಪೋಷನ್ ಯೋಜನೆ ವತಿಯಿಂದ ಕಾರ್ನಾಡ್‌ನಲ್ಲಿ ಕಾರ್ಯಕ್ರಮ ಜರುಗಿತು.
ಅದಾನಿ ಫೌಂಡೇಶನ್ ಸುಪೋಷನ್ ಯೋಜನೆ ಅಧಿಕಾರಿ ಪ್ರೇಮಾ ಡಿಸೋಜ ಅವರು ನವಜಾತ ಶಿಶು ಮತ್ತು ಮಕ್ಕಳ ದಿನಾಚರಣೆ ಬಗ್ಗೆ ಮಾತನಾಡಿದರು. ಮೂಲ್ಕಿ ನಗರ ಪಂಚಾಯಿತಿ ಇಂಜಿನಿಯರ್ ಅಶ್ವಿನಿ, ಅಂಗನವಾಡಿ ಬಾಲವಿಕಾಸ ಸಮಿತಿ ಸದಸ್ಯ ಪುತ್ತುಬಾವ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಸಹಾಯಕಿ ಸುಶೀಲ ಮೊದಲಾದವರು ಉಪಸ್ಥಿತರಿದ್ದರು.