ಉಡುಪಿ: ಅಣಕು ನ್ಯಾಯಾಲಯದ ಸ್ಪರ್ಧೆ ವೃತ್ತಿ ಕೌಶಲ್ಯದ ಅನುಭವಗಳನ್ನು ನೀಡುತ್ತದೆ. ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ವಕೀಲರು ವೃತ್ತಿ ಧರ್ಮಕ್ಕೆ ಕಳಂಕ ಬಾರದಂತೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಈಶ್ವರನ್ ಎಸ್. ಹೇಳಿದರು.
ಭಾನುವಾರ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಪಿ.ಶಿವಾಜಿ ಶೆಟ್ಟಿ ಸ್ಮಾರಕ 8ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವೈಕುಂಠ ಬಾಳಿಗ ಕಾನೂನು ಕಾಲೇಜಿನ ನಿರ್ದೇಶಕಿ ಪ್ರೊ. ಡಾ. ನಿರ್ಮಲಾ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಪತ್ನಿ ಜಯಂತಿ ಪಿ.ಶಿವಾಜಿ ಶೆಟ್ಟಿ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಪ್ರೊ. ಚಿದಾನಂದ ರೆಡ್ಡಿ ಎಸ್.ಪಾಟೀಲ್, ಪ್ರಾಂಶುಪಾಲ ರುನಾಥ್ ಕೆ. ಎಸ್., ಕಾರ್ಯಕ್ರಮ ಸಂಯೋಜಕಿ ಸುರೇಖಾ ಕೆ. , ಕಾಲೇಜಿನ ಹಳೆ ವಿದ್ಯಾರ್ಥಿ ಸಂದ ಅಧ್ಯಕ್ಷ ಶ್ರೀಧರ್ ಪಿ. ಎಸ್. ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಪ್ರೀತಿ ಹರೀಶ್ರಾಜ್ ಸ್ವಾಗತಿಸಿ, ಅಮೋಘ್ ವಂದಿಸಿದರು. ವಿದ್ಯಾರ್ಥಿನಿ ಕೋಯಲ್ ನಿರೂಪಿಸಿದರು.
ಬಹುಮಾನ
ಸ್ಪರ್ಧೆಯಲ್ಲಿ ಬೆಂಗಳೂರು ಕೆಎಲ್ಇ ಕಾನೂನು ಕಾಲೇಜು ಪ್ರಥಮ, ಮಂಗಳೂರು ಎಸ್ಡಿಎಂ ಕಾನೂನು ಕಾಲೇಜು ದ್ವೀತಿಯ ಬಹುಮಾನ ಗಳಿಸಿದರು. ಜಡ್ಜ್ಮೆಂಟ್ ರೈಟಿಂಗ್ನಲ್ಲಿ ಚಿಕ್ಕೋಡಿ ಕೆಎಲ್ಇ ಕಾನೂನು ಕಾಲೇಜಿನ ಶ್ರೇಯಾ ಹೊದ್ದಾರ್ ಪ್ರಥಮ, ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ಪಿ. ವಿಶಿಕಾ ದ್ವೀತಿಯ ಬಹುಮಾನ ಪಡೆದರು. ಬೆಸ್ಟ್ ಮೆಮೋರಿಯಲ್ ಬಹುಮಾನ ಬೆಂಗಳೂರು ಕೆಎಲ್ಇ ಕಾನೂನು ಕಾಲೇಜಿನ ತಂಡ, ಬೆಸ್ಟ್ ಲೇಡಿ ಅಡ್ವಕೇಟ್ ಬಹುಮಾನ ಬೆಂಗಳೂರು ಬಿಎಂಎಸ್ ಕಾಲೇಜಿನ ಹರ್ಷಿತಾ ಜಿ, ಬೆಸ್ಟ್ ಮೇಲ್ ಅಡ್ವಕೇಟ್ ಬಹುಮಾನವನ್ನು ಮಂಗಳೂರು ಎಸ್ಡಿಎಂ ಕಾನೂನು ಕಾಲೇಜಿನ ಸಚಿನ್ ಮಹದೇವ್ ಹೆಗ್ಡೆ ಪಡೆದರು.