ಜಿಲ್ಲೆ

ಜವಾಹರ್ ನವೋದಯ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

ಮಡಿಕೇರಿ: ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಗುರುವಾರ ಆಚರಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪಂಚಾಯತ್‌ನ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಶ್ರೀನಿವಾಸ ರಾಮಾನುಜನ್‌ರವರು ಗಣಿತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ವಿದ್ಯಾರ್ಥಿಗಳು ಇಂತಹ ವ್ಯಕ್ತಿಗಳನ್ನು ಆದರ್ಶವನ್ನಾಗಿಸಿ ಅವರ ಹೆಜ್ಜೆಯಲ್ಲಿ ಸಾಗಬೇಕು ಎಂದರು.


ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗದಾಮಯ್ಯ ಮಾತನಾಡಿ, ದೈನಂದಿನ ಜೀವನದಲ್ಲಿ ಗಣಿತದ ಮಹತ್ವ ಹೆಚ್ಚಿನದ್ದಾಗಿದೆ ಎಂದರು.


ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್ ಮತ್ತು ಉಪ ಪ್ರಾಂಶುಪಾಲ ಸುಧಾಮಣಿ, ಎನ್‌ಆರ್‌ಡಿಎಂಎಸ್‌ನ ಜಿಲ್ಲಾ ಯೋಜನಾ ಸಂಯೋಜಕ ಬಿ.ಎಂ.ಸೂರಜ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥ ಡಾ.ರಾಜೇಂದ್ರ ಮತ್ತು ಕಡಗದಾಳು ಸರ್ಕಾರಿ ಪ್ರೌಡಶಾಲೆಯ ಗಣಿತ ಶಿಕ್ಷಕಿ ಭಾರತಿ ಉಪನ್ಯಾಸ ನೀಡಿದರು. ಗಣಿತ ದಿನಾಚರಣೆಯ ಪ್ರಯುಕ್ತ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಗಣಪತಿ ಎನ್.ಟಿ.ಪ್ರಥಮ, ಕೆ.ಜಿ.ನಿಧಿ(ದ್ವಿ), ಎಂಟನೇ ತರಗತಿಯ ಕಿರಣ್.ವಿ, ತೃತೀಯ ಬಹುಮಾನ ಪಡೆದರು.


ಎಂಟನೇ ತರಗತಿಯ ಜೋವಿನ್ ರೊಬಿನ್, ಒಂಬತ್ತನೆ ತರಗತಿಯ ಕೆ.ಎ.ಗಣಪತಿ, ಕೆ.ಎ.ತನಿ?್, ಕರಣ್ ಕರುಂಬಯ್ಯ, ಕೀರ್ತನ ಎ ಮತ್ತು ಹತ್ತನೇ ತರಗತಿಯ ಕೆ.ಎಲ್.ಭಾರ್ಗವ ಸಮಾಧಾನಕರ ಬಹುಮಾನ ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.