ಕೆಜಿಎಫ್: ಸೆ.13ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿದ್ದು, ಚೆಕ್ ಬೌನ್ಸ್, ಕುಟುಂಬ ವ್ಯಾಜ್ಯ ಸೇರಿ ವಿವಿಧ ಪ್ರಕರಣಗಳನ್ನು ಅದಾಲತ್ನಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿರುವುದರಿಂದ ವಕೀಲರು, ಕದಾರರು ಸಹಕರಿಸಬೇಕು ಎಂದು 3ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಶಿವಕುಮಾರ್ ತಿಳಿಸಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿರುವ ಕುಸುಮ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ನಲ್ಲಿ ಕೇಸ್ ಮುಂದುವರಿಸಿದರೆ ಸಮಸ್ಯೆ ಬಗೆಹರಿಸಲು ವರ್ಷಗಳೇ ಕಳೆದು ಹೋಗಲಿದೆ. ಆದ್ದರಿಂದ ಚೆಕ್ಬೌನ್ಸ್ ಕೇಸ್ಗಳಲ್ಲಿ ಹಣ ನೀಡಿದವರಿಗೂ ಹಣ ಪಡೆದವರ ಮಧ್ಯೆ ವಿಚಾರಗಳು ತಿಳಿದಿರುತ್ತದೆ, ಆದ್ದರಿಂದ ವಿನಾಕಾರಣವಾಗಿ ನ್ಯಾಯಾಲಯಗಳಲ್ಲಿ ಪ್ರಕರಣ ಮುಂದುವರಿಸುವುದು ಬಿಟ್ಟು ಪ್ರಕರಣ ಇತ್ಯರ್ಥಕ್ಕೆ ಮುಂದಾಗಬೇಕು. ಲೋಕ ಅದಾಲತ್ನಲ್ಲಿ ಜಿಲ್ಲೆಯಲ್ಲೇ ಕೆಜಿಎಫ್ ನ್ಯಾಯಾಲಯ ಪ್ರಥಮ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ವಕೀಲರು ಕದಾರರು ಸಹಕರಿಸಬೇಕು ಎಂದರು.
ನ್ಯಾಯಾಧೀಶೆ ಜಯಲಕ್ಷಿ$್ಮ ಮಾತನಾಡಿ, ವಕೀಲರು ಹಾಗೂ ಕದಾರರು ಪ್ರಥಮವಾಗಿ ಲೋಕ ಅದಾಲತ್ನ ಮಹತ್ವ ಅರಿತುಕೊಳ್ಳಬೇಕು. ಅದಾಲತ್ನ ಉಪಯೋಗ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ವಕೀಲರ ಸಂದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ವಕೀಲರು ಲೋಕಾ ಅದಾಲತ್ ಯಶಸ್ವಿಗೊಳಿಸಲು ಸಿದ್ಧರಿದ್ದು, ಕೆಜಿಎಫ್ನಲ್ಲಿ ಬಹುತೇಕ ಬಡವರಿದ್ದು, ಚೆಕ್ಬೌನ್ಸ್ ಕೇಸ್ಗಳಲ್ಲಿ ಪಾರ್ಟಿ ಹಣ ಪಾವತಿ ನೀಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.