National Level Open Shuttle Badminton Tournament in Mangalore from 26 
ಜಿಲ್ಲೆ

ಮಂಗಳೂರಿನಲ್ಲಿ 26ರಿಂದ ರಾಷ್ಟ್ರಮಟ್ಟದ ಮುಕ್ತ ಷಟ್ಲ್ ಬ್ಯಾಡ್ಮಿಂಟನ್ ಟೂರ್ನಿ

ಮಂಗಳೂರು: ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಆ.26, 27ರಂದು ಮಂಗಳಾ ಕಪ್ ಜೂನಿಯರ್ ರಾಷ್ಟ್ರಮಟ್ಟದ ಮುಕ್ತ ಷಟ್ಲ್ ಬ್ಯಾಡ್ಮಿಂಟನ್ ಟೂರ್ನಿ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

9, 11, 13, 15, 17 ಮತ್ತು 19 ವಯೋಮಿತಿ ಸಿಂಗಲ್ಸ್ ಮತ್ತು ಡಬಲ್ಸ್ ಬಾಲಕ ಬಾಲಕಿಯರ ಮುಕ್ತ ಟೂರ್ನಿ ಇದಾಗಿದ್ದು, ಒಟ್ಟು 3 ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿದೆ. ಕೇರಳ, ಗೋವಾ, ತಮಿಳುನಾಡುಗಳಿಂದಲೂ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ 9620189525ಗೆ ವಾಟ್ಸಾೃಪ್ ಅಥವಾ ಎಸ್‌ಎಂಎಸ್ ಮೂಲಕ ಸಂಪರ್ಕಿಸಿ ಆ.22ರ ಸಂಜೆ 6 ಗಂಟೆ ಒಳಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಅಸೋಸಿಯೇಶನ್ ಅಧ್ಯಕ್ಷ ಸುಪ್ರೀತ್ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ದೀಪಕ್ ಕುಮಾರ್, ಕೋಶಾಧಿಕಾರಿ ಲಕ್ಷ್ಮಿ ಪಿ.ಸುವರ್ಣ, ಕ್ರೀಡಾ ಸಂಚಾಲಕ ಟೆರೆನ್ಸ್ ಅಜಯ್, ಅಭಿವೃದ್ಧಿ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಿ.ಎಸ್.ಭಂಡಾರಿ ಸುದ್ದಿಗೋಷ್ಠಿಯಲ್ಲಿದ್ದರು.