ಜಿಲ್ಲೆ

30ರಿಂದ ರಾಷ್ಟ್ರ ಮಟ್ಟದ ಓಪನ್ ಶೂಟಿಂಗ್ ಚಾಂಪಿಯನ್‌ಷಿಪ್

reportermng

ಮಂಗಳೂರು: ಮಂಗಳೂರು ರೈಲ್ ಕ್ಲಬ್ ವತಿಯಿಂದ ದ.ಕ. ಜಿಲ್ಲಾಡಳಿತ ಸಹಕಾರದಲ್ಲಿ ಜು.30ರಿಂದ ಆ.7ರವರೆಗೆ ಮಂಗಳೂರಿನಲ್ಲೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಓಪನ್ ಶೂಟಿಂಗ್ ಚಾಂಪಿಯನ್‌ಷಿಪ್ ಆಯೋಜಿಸಲಾಗಿದೆ.
ಎನ್‌ಆರ್ ಮತ್ತು ಐಎಸ್‌ಎಸ್‌ಎ್ ವಿಭಾಗದ ಈ ಸ್ಪರ್ಧಾಕೂಟ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಜುಗಲ್ ಟವರ್ಸ್‌ನ 4ನೇ ಮಹಡಿಯ ರೈಲ್ ಕ್ಲಬ್‌ನಲ್ಲಿ ಜರುಗಲಿದೆ. 10ಎಂ ಏರ್‌ರೈಲ್ ಮತ್ತು ಏರ್ ಪಿಸ್ತೂಲ್‌ನಲ್ಲಿ ಸಬ್ ಯೂತ್, ಯೂತ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸ್ಪರ್ಧೆ ನಡೆಯಲಿದೆ. ಏರ್ ರೈಲ್ ಮತ್ತು ಏರ್‌ಪಿಸ್ತೂಲ್ ಓಪನ್ ಚಾಲೆಂಜ್ ವಿಜೇತರಿಗೆ ಸ್ವರ್ಣ, ಬೆಳ್ಳಿ, ಕಂಚಿನ ಪದಕದೊಂದಿಗೆ 1 ಲಕ್ಷ, 50 ಸಾವಿರ, 25 ಸಾವಿರ ರೂ. ನಗದು ಬಹುಮಾನ ಗೆಲ್ಲುವ ಅವಕಾಶವಿದೆ ಎಂದು ಕ್ಲಬ್ ಕಾರ್ಯದರ್ಶಿ ಮುಕೇಶ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜು.30ರಂದು ಬೆಳಗ್ಗೆ 9.30ಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಬ್ಯಾಂಕ್ ಆ್ ಬರೋಡದ ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಉಪಸ್ಥಿತರಿರುವರು. ಎನ್‌ಆರ್ ವಿಭಾಗದ ಬಹುಮಾನ ವಿತರಣೆ ಆ.1ರಂದು ಸಂಜೆ 6 ಗಂಟೆಗೆ ಕದ್ರಿ ಮಲ್ಲಿಕಟ್ಟೆಯ ಜುಗಲ್ ಟವರ್ಸ್‌ನಲ್ಲಿ ನಡೆಯಲಿದೆ. ಅಂತಿಮ ಪಂದ್ಯ ಆ.7ರಂದು ಮಧ್ಯಾಹ್ನ 2ಗಂಟೆಗೆ ಲಾಲ್‌ಬಾಗ್‌ನ ಯುಎಸ್ ಮಲ್ಯಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿದೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಭಾರತೀಯ ಶೂಟಿಂಗ್ ತಂಡ ಫಿಸಿಯೋಥೆರಪಿಸ್ಟ್ ಡಾ.ಸುಮಿತಾ, ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ರಾಷ್ಟ್ರ ಮಟ್ಟದ ಶೂಟರ್‌ಗಳಾದ ನಜೀಮಾ ಆಲಿ ಮನ್ನಿಪ್ಪಾಡಿ ಮತ್ತು ಪ್ರೀಮಲ್ ಫುರ್ಟಾಡೋ ಇದ್ದರು.