ಮಂಗಳೂರು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ನಡೆದ 44 ನೇ ವೆಟರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾ ಕೂಟದಲ್ಲಿ 35 ವರ್ಷ ವಯೋಮಿತಿಯ ಪುರುಷರ ಹ್ಯಾಮರ್ ಥ್ರೋ ವಿಭಾಗದಲ್ಲಿ ಮಂಗಳೂರಿನ ಸುಹಾನ್ ಕರ್ಕೇರ ಚಿನ್ನದ ಪದಕ ಪಡೆದಿದ್ದಾರೆ.
ಇವರು ಖೇಲೋ ಇಂಡಿಯಾ ಹ್ಯಾಮರ್ ಪದಕ ವಿಜೇತ ಯಮನೂರಪ್ಪ ಆರ್.ವಿ. ಅವರಿಂದ ತರಬೇತಿ ಪಡೆದಿದ್ದಾರೆ.