ಎಂ.ಎ. ಗೋಪಾಲಸ್ವಾಮಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಎಂ.ಎ.ಗೋಪಾಲಸ್ವಾಮಿ ಚನ್ನರಾಯಪಟ್ಟಣದ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಮ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕೆ.ವಿ.ಪ್ರಭಾಕರ್ ಆಟಗಾರರಿಗೆ ಶುಭಕೋರಿದರು. ಕುಸುಮಾ, ಎಂ.ಎ. ಗೋಪಾಲಸ್ವಾಮಿ, ಶಿವಾನಂದ ತಗಡೂರು ಸೇರಿದಂತೆ ಇತರರು ಭಾಗವಹಿಸಿದ್ದರು. 
ಜಿಲ್ಲೆ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಶಿವಶಂಕರ್ ಎಂ. ಹೆಬ್ಬಳ್ಳ

ಚನ್ನರಾಯಪಟ್ಟಣ: ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಎಂ.ಎ.ಗೋಪಾಲಸ್ವಾಮಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಚಾಲನೆ ನೀಡಿದರು. ಗೋಪಾಲಸ್ವಾಮಿ ಅವರು ಜನಾನುರಾಗಿ, ಕಾಂಗ್ರೆಸ್ ಪಕ್ಷದ ಕಟ್ಟಾಳು. ಮುಂದಿನ ವಿಧಾನಸಭಾ ಚುನಾ ವಣೆಯಲ್ಲಾದರೂ ಅವರನ್ನು ತಾಲೂಕಿನ ಜನತೆ ಕೈಹಿಡಿದು ವಿಧಾನಸೌಧಕ್ಕೆ ಕಳುಹಿಸಿ ಕೊಡಬೇಕು ಎಂದು ಜನರಲ್ಲಿ ಕೋರಿದರು. ಪಟ್ಟಣದ ಮಾಧ್ಯಮಿಕ ಶಾಲಾ ಆವರಣ ದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ತಮಿಳು ನಾಡು, ಆಂಧ್ರಪ್ರದೇಶ, ಕೇರಳ ಸೇರಿ ವಿವಿಧ ರಾಜ್ಯದ 16 ತಂಡಗಳು ಪಾಲ್ಗೊಂಡಿದ್ದವು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ನಾಯಕಿ ಕುಸುಮಾ, ಬಿಗ್‌ಬಾಸ್ ಸ್ಪರ್ಧಿ ಐಶ್ವರ್ಯಾ ಸಿಂದೋಗಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಡೇನಹಳ್ಳಿ ಲೋಕೇಶ್, ಬಿ.ಆರ್. ನಾಯ್ಡು ಪಟೇಲ್ ಶಿವಪ್ಪ, ಹನುಮಂತರಾಯಪ್ಪ, ನಟರಾಜು, ಲಕ್ಷ್ಮೀನಾರಾಯಣ್, ಚಿದಾನಂದ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.