ವಿಹಾನ್ ಹತ್ವಾರ್  
ಜಿಲ್ಲೆ

ಚೆಸ್‌ನಲ್ಲಿ ವಿಹಾನ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಇಂದಿರಾ ಎನ್ ಕೆ

ಬ್ರಹ್ಮಾವರ: ಹುಬ್ಬಳ್ಳಿ ಚೆಸ್ ಅಕಾಡೆಮಿ ಹಾಗೂ ಬಿಜಿಎಸ್-ಎನ್‌ಪಿಎಸ್ ಸ್ಕೂಲ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಡೆದ ಏಳು ವರ್ಷದೊಳಗಿನ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಜಿಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ಎರಡನೇ ತರಗತಿ ವಿದ್ಯಾರ್ಥಿ ವಿಹಾನ್ ಹತ್ವಾರ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ವಿದ್ಯಾ ಸಂಸ್ಥೆ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲ ಜಾರ್ಜ್ ಕುರಿಯನ್ ಅಭಿನಂದಿಸಿದರು. ವಿಹಾನ್ ಉಡುಪಿಯ ಶಿಶಿರ್ ಹಾಗೂ ಶ್ರೀದೇವಿ ದಂಪತಿ ಪುತ್ರ.