ಜಿಲ್ಲೆ

ರಾಷ್ಟ್ರಮಟ್ಟದ ಡ್ರ್ಯಾಗನ್ ಬೋಟ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಚಾಂಪಿಯನ್

ಗೋಪಾಲಕೃಷ್ಣ ಪಾದೂರ್

 ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್, ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದೊಂದಿಗೆ ಆಯೋಜಿಸಲಾದ 11ನೇ ರಾಷ್ಟ್ರೀಯ ಮಟ್ಟದ "ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್" ಪಂದ್ಯಾಟ ಸಮಾರೋಪ ಸಮಾರಂಭ ಉಪ್ಪೂರಿನ ಮಡಿಸಾಲು ನದಿಯಲ್ಲಿ ಭಾನುವಾರ ನಡೆಯಿತು. ಕರ್ನಾಟಕ ತಂಡ ಪ್ರಥಮ ಸ್ಥಾನ  ಹಾಗೂ ದೆಹಲಿ ತಂಡ ರನ್ನರ್ ಅಪ್  ಸ್ಥಾನ ಪಡೆದಿದೆ. 

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಿಜೇತರಿಗೆ  ಬಹುಮಾನ ವಿತರಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ರಘುಪತಿ ಭಟ್, ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್ ಕುಶ್ವಾಹಾ, ಭಾರತೀಯ  ಕಯಾಕಿಂಗ್ & ಕನೂಯಿಂಗ್ ಅಸೋಸಿಯೇಷನ್ ಆಫ್  ಕರ್ನಾಟಕದ ಅಧ್ಯಕ್ಷ ಮೇಜರ್ ಜನರಲ್ ಎಂ.ಎನ್ ದೇವಯ್ಯ, ಕಾರ್ಯದರ್ಶಿ ದಿಲೀಪ್ ಕುಮಾರ್, ಭಾರತೀಯ ಡ್ರ್ಯಾಗನ್ ಬೋಟ್ ತಂಡದ ನಾಯಕ ಮಂಜೀತ್ ಸಿಂಗ್, ಡ್ರ್ಯಾಗನ್ ಬೋಟ್ ಪಂದ್ಯಾವಳಿಯ ಸ್ವಾಗತ ಸಮಿತಿಯ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ  ಉಪಸ್ಥಿತರಿದ್ದರು.