ಚಿಕ್ಕೋಡಿ: ಉತ್ತರ ಪ್ರದೇಶದ ಲಖನೌದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಸಹಕಾರ ಬ್ಯಾಂಕ್ಗಳ ಸಂಯೋಜನೆ ಹಾಗೂ ್ರಾಂಟಿಯರ್ಸ್ ಕೋ&ಆಪರೇಟಿವ್ ಬ್ಯಾಂಕಿಂಗ್ ಅವಾರ್ಡ್ಸ್ &2024ರಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಜೊಲ್ಲೆ ಗ್ರೂಪ್ನ ಅಂಗ ಸಂಸ್ಥೆಯಾದ ಶ್ರೀಬಿರೇಶ್ವರ ಸಂಸ್ಥೆಗೆ ಐಟಿ ವಿಭಾಗದಲ್ಲಿ "ರಾಷ್ಟ್ರಮಟ್ಟದ ಬೆಸ್ಟ್ ಐಟಿ ಹೆಡ್ ಅವಾರ್ಡ್&2024 ಪ್ರಶಸ್ತಿ' ಲಭಿಸಿದೆ.
ಬ್ಯಾಂಕಿಂಗ್ ್ರಾಂಟಿಯರ್ ಸಂಸ್ಥಾಪಕ ಬಾಬು ನೈಯರ್, ಗ್ರೂಪ್ ಅಡಿಟರ್ ಮನೋಜ್ ಅಗ್ರವಾಲ್, ಎನ್ಎಎ್ಸಿಯುಬಿ ನಿರ್ದೇಶಕ ಸುಭಾಸ ಗುಪ್ತಾ ಹಾಗೂ ಪ್ರಮೋದ ಕರ್ನಾಡ್ ಅವರು ಸಂಸ್ಥೆಯ ಪರವಾಗಿ ಉಪ ಪ್ರಧಾನ ವ್ಯವಸ್ಥಾಪಕ ಸುರೇಶ ಮಾನೆ, ಸಹಾಯಕ ಪ್ರಧಾನ ವ್ಯವಸ್ಥಾಪಕ ಶೇಖರ ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.