ಜಿಲ್ಲೆ

ರಾಷ್ಟ್ರೀಯ ಹಿಂದಿ ದಿನ ಆಚರಣೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಇಲ್ಲಿನ ಕೆಎಸ್​ಆರ್​ ಸಿಬಿಎಸ್​ಇ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಹಿಂದಿ ದಿನ ಆಚರಿಸಲಾಯಿತು.

ಲಿಂಗರಾಜ್​ ಕಾಲೇಜಿನ ಹಿಂದಿ ಪ್ರಾಧ್ಯಾಪಕಿ ಡಾ. ಕಲಾವತಿ ನಿಂಬಾಳ್ಕರ್​ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಹಿಂದಿ ಭಾಷೆಯ ವೈಭವ, ವಿಕಸನ ಮತ್ತು ಭವಿಷ್ಯದ ನಿರೀೆ ವಿವರಿಸಿದರು. ವಿದ್ಯಾರ್ಥಿಗಳಿಂದ ಹಿಂದಿ ಹಾಡು, ಕಥೆಗಳು, ದೋಹೆಗಳು ಮತ್ತು ವ್ಯಾಕರಣ ಕುರಿತ ಪ್ರದರ್ಶನಗಳಾದವು. ವಿವಿಧ ಸ್ಪರ್ಧೆಗಳು ಮತ್ತು ಭಾಷಾ ಆಧಾರಿತ ಚಟುವಟಿಕೆಗಳ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಾಂಶುಪಾಲ ಡಾ.ರತ್ನಾ ಬೆಂಡಿಗೇರಿ ಅಧ್ಯತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕಿ ಚಂದ್ರಮತಿ ವೆರ್ಣೇಕರ, ಸಂಯೋಜಕ ಸಚಿನ ಅಮಠೆ, ಹಿಂದಿ ವಿಭಾಗದ ಶಿಕಿ ಲತೀಫಾ ಮುಲ್ಲಾ, ವರ್ಷಾ ಗಾಡಿವಡ್ಡರ್​ ಇತರರಿದ್ದರು.