ranjith dandora 
ಜಿಲ್ಲೆ

ಜೂ.19 ರಂದು ರಾಷ್ಟ್ರೀಯ ಹೆದ್ದಾರಿ ತಡೆ

Raichur - Reporter - Rachhai Swamy

ರಾಯಚೂರು ರಾಯಚೂರು-ಮಂತ್ರಾಲಯದ ಮಾರ್ಗದಲ್ಲಿ ಬರುವ ಹಳ್ಳಿಗಳಿಗೆ ಸರಿಯಾಗಿ ವೇಗದೂತ ಬಸ್‌ಗಳು ನಿಲುಗಡೆ ಒತ್ತಾಯಿಸಿ ಜೂ.19 ರಂದು ತಾಲೂಕಿನ ತುಂಟಾಪುರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಮಾಡಲಾಗುತ್ತದೆಂದು ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಯುವ ಸೇನಾ ಅಧ್ಯಕ್ಷ ರಂಜಿತ್ ದಂಡೋರಾ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ರಾಯಚೂರು ಮಂತ್ರಾಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗ್ರಾಮದಗಳಾದ ತುಂಟಾಪೂರ, ಮಂಜರ್ಲಾ ಕ್ರಾಸ್, ಗುಂಜಹಳ್ಳಿ, ಹಂಚಿನಾಳ, ಕೆರೆ ಬೂದೂರು, ಮತ್ತು ತುಂಗಭದ್ರಾ ಗ್ರಾಮಗಳಲ್ಲಿ ವೇಗದೂತ ಮತ್ತು ಇತರೆ ಬಸ್ ಗಳಿಲ್ಲದೆ, ರಾಯಚೂರು ಮತ್ತು ಯರಗೇರಾ, ಮತ್ತು ಗುಂಜಹಳ್ಳಿಗೆ ತೆರಳುವ ಶಾಲಾ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಬೆಳಗ್ಗೆ, ಮದ್ಯಾಹ್ನ, ಮತ್ತು ಸಂಜೆ ಶಾಲಾ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿತ್ತು, ಎರಡು ದಿನ ಬಸ್ ನಿಲುಗಡೆ ಮಾಡಿದ್ದು, ಮತ್ತೆ ಯತಾಸ್ಥಿತಿ ಮುಂದುವರೆಸಿದೆ ಎಂದು ದೂರಿದರು.

ರಾಯಚೂರನಿಂದ ಮಂತ್ರಾಲಯಕ್ಕೆ ಪ್ರತಿದಿನ 84 ಬಸ್‌ಗಳು ಸಂಚಾರಕ್ಕೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದು, ಆದರೆ ರಾಯಚೂರು ವಿಭಾಗೀಯ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ, 84 ಬಸ್‌ಗಳು ಮಂತ್ರಾಲಯ ಮಾರ್ಗವಾಗಿ ಎಲ್ಲೆಲ್ಲಿ ಮಾಹಿತಿ ನೀಡುತ್ತಿಲ್ಲ ಆರೋಪಿಸಿದರು.

ಈ ಸಂದರ್ಭದಲ್ಲಿ ತಾಲೂಕ ಅದ್ಯಕ್ಷ ದುಳ್ಳಯ್ಯ ಗುಂಜಳ್ಳಿ, ಜಕ್ರಪ್ಪ ಹಂಚಿನಾಳ ಹನುಮಂತು ಜುಲಮಗೇರಾ, ಬೀಮೇಶ ತುಂಟಾಪೂರ, ಅನಿಲ್ ಕುಮಾರ, ಮಾರುತಿ, ನಾಗರಾಜ, ಸುಧಾಕರ ಇದ್ದರು.