ಕಡಬ: ಪ್ರಜಾಧ್ವನಿ ಕರ್ನಾಟಕದ ವತಿಯಿಂದ ನ.26 ಸಂವಿಧಾನದ ಸಮರ್ಪಣಾ ದಿನ ನೆನಪಿನ ಪ್ರಯುಕ್ತ ಬುಧವಾರ ರಾಷ್ಟ್ರಧ್ವಜ ಗೌರವ ಯಾತ್ರೆಗೆ ಕಡಬದ ತಾಲೂಕು ಆಡಳಿತ ಸೌಧದ ಬಳಿ ಚಾಲನೆ ನೀಡಲಾಯಿತು.
ಯಾತ್ರೆಯ ಉದ್ಘಾಟನೆಯನ್ನು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ನೆರವೇರಿದರು. ಕಡಬ ಠಾಣಾ ಉಪನೀರಿಕ್ಷಕ ಅಭಿನಂದನ್ ಎಂ.ಎಸ್.ಸಂವಿಧಾನ ಪೀಠಿಕೆ ವಾಚಿಸಿದರು. ಕಾರ್ಯಕ್ರಮ ಸಂಚಾಲಕ ಮಾಜಿ ಸೈನಿಕ ಮ್ಯಾಥ್ಯು ಟಿ.ಜಿ.ಮಾತನಾಡಿ ಗೌರವ ಯಾತ್ರೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಬಳಿಕ ರಾಷ್ಟ್ರ ಧ್ವಜವನ್ನು ಇರಿಸಿದ ವಾಹನಗಳು ಮುಖಾಂತರ ಕಡಬ ಮುಖ್ಯಪೇಟೆಯ ಮೂಲಕ ಪಂಜದತ್ತ ತೆರಳಿತು. ತಾ.ಪಂ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಸ್ವಾಗತಿಸಿದರು. ಸೆಬಿಷ್ಟಿಯನ್ ಕೆ.ಕೆ ವಂದಿಸಿದರು.