ಮಾಸ್ತಿ: ಟೇಕಲ್ ಸಮೀಪ ರಾಷ್ಟ್ರಧ್ವಜ ಸುಟ್ಟ ಟಿಪ್ಪರ್ ಚಾಲಕನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಉತ್ತರಪ್ರದೇಶ ಮೂಲದ ಚಾಲಕ ಸತ್ಯೇಂದ್ರ ಕುಮಾರ್ ಯಾದವ್ ಬಂಧಿತ. ಈತ ತಮಿಳುನಾಡಿನ ಕೆ.ಎನ್.ದೊಡ್ಡಿ ಬಳಿಯ ಕ್ರಷರ್‌ನಲ್ಲಿ ಟಿಪ್ಪರ್‌ಗೆ ಲೋಡ್ ವಾಡುತ್ತಿದ್ದ ಸಮಯದಲ್ಲಿ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದ ದೃಶ್ಯ ಸಾವಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಭಾನುವಾರ ಟಿಪ್ಪರ್ ವಾಲೀಕ ಈತನನ್ನು ಕರೆದುಕೊಂಡು ಟೇಕಲ್ ವಾರ್ಗವಾಗಿ ಆಗಮಿಸುತ್ತಿದ್ದಾಗ ರೊಚ್ಚಿಗೆದ್ದ ಸಾರ್ವಜನಿಕರು, ಕೆಳಗಿಳಿಸಿ ಥಳಿಸಿ ಬುದ್ಧಿ ಹೇಳಿದ್ದಾರೆ.
ಬಳಿಕ ರಾಷ್ಟ್ರಧ್ವಜ ಹಾಗೂ ನಾಡಧ್ವಜವನ್ನು ಆತನ ಕೈಗೆ ಕೊಟ್ಟು ಭಾರತ ವಾತಾಕೀ ಜೈ ೋಷಣೆ ಕೂಗುವಂತೆ ತಿಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದಾಗ, ವಿಷಯ ತಿಳಿದ ಟೇಕಲ್ ಹೊರಠಾಣೆ ಪೊಲಿಸರು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಆಸ್ಪತ್ರೆಗೆ ವಾಲೂರು ಸರ್ಕಲ್ ಇನ್‌ಸ್ಪೆಕ್ಟರ್ ವಾರ್ಕೊಂಡಪ್ಪ, ವಾಸ್ತಿ ಪಿಎಸ್‌ಐ ಪ್ರದೀಪ್ ಭೇಟಿ ನೀಡಿ ವಿಚಾರಣೆ ನಡೆಸಿದರು. ನಂತರ ಈ ಕೃತ್ಯ ತಮಿಳುನಾಡಿನ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ತಮಿಳುನಾಡು ವ್ಯಾಪ್ತಿಯ ಪೊಲಿಸರ ವಶಕ್ಕೆ ನೀಡಲಾಗುವುದೆಂದು ವಾಸ್ತಿ ಪೊಲೀಸರು ತಿಳಿಸಿದ್ದಾರೆ.