ಕೃಷ್ಣರಾಜಸಾಗರ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಣೆಕಟ್ಟೆ ಮುಂಭಾಗದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ಇಂಜಿನಿಯರ್ ಜಯಂತ ಧ್ವಜಾರೋಹಣ ನೆರವೇರಿದರು. 
ಜಿಲ್ಲೆ

ಕೆಆರ್‌ಎಸ್‌ನಲ್ಲಿ ರಾಷ್ಟ್ರ ಧ್ವಜಾರೋಹಣ

ಮಾದೇಶ್ ತಿ.ನರಸೀಪುರ

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಣೆಕಟ್ಟೆ ಮುಂಭಾಗದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ಇಂಜಿನಿಯರ್ ಜಯಂತ ಧ್ವಜಾರೋಹಣ ನೆರವೇರಿದರು.

ಸ್ವಾತಂತ್ರೃ ಹೋರಾಟಗಾರರ ಹೋರಾಟವೇ ಪ್ರಸ್ತುತ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಎಲ್ಲರೂ ಶ್ರಮವಹಿಸಿ ಬಲಿಷ್ಠ ಭಾರತ ಮಾಡವಲ್ಲಿ ಸಹಕಾರ ಅಗತ್ಯ ಎಂದರು.

ಅಣೆಕಟ್ಟೆ ಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ವತಿಯಿಂದ ಸಹಾಯಕ ಕಮಾಡೆಂಟ್ ಪ್ರಮೋದ್ ನೇತೃತ್ವದಲ್ಲಿ ವಂದನೆ ಸಲ್ಲಿಸಿಲಾಯಿತು. ನಂತರ ಪಥಸಂಚಲನ ನಡೆಸಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕ್‌ಅಬು, ರಶ್ಮಿ, ಶ್ವೇತಾ, ಉಸ್ತುವಾರಿ ಅಧಿಕಾರಿ ಪ್ರತಾಪ್, ಶ್ರೀನಿವಾಸ್, ಲೋಹಿತ್, ವೇಣುಗೋಪಾಲ್, ಪುನೀತ್, ಅಭಿಲಾಷ್, ಅಕಿಬ್ ಜಾವೇದ್, ಶಿವಕುಮಾರ್ ಇತರರು ಇದ್ದರು.