ಜಿಲ್ಲೆ

ನಾಡಹಬ್ಬ ಉತ್ಸವ ಸಮಿತಿ ಕಾರ್ಯ 'ಶ್ಲಾಘನೀಯ'

ಮುನವಳ್ಳಿ: ಅರ್ಥಪೂರ್ಣವಾಗಿ ನಾಡಹಬ್ಬದ ರಜತ ಮಹೋತ್ಸವ ಆಚರಿಸುತ್ತಿರುವ ಮುನವಳ್ಳಿಯ ನಾಡಹಬ್ಬ ಉತ್ಸವ ಸಮಿತಿ ಕಾರ್ಯ ಶ್ಲಾನೀಯ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಡಹಬ್ಬ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ನಾಡಹಬ್ಬ ಎಲ್ಲರನ್ನೂ ಒಂದುಗೂಡಿಸುವ ಹಬ್ಬ. ನಮ್ಮ ನಾಡಿನ ಸಮೃದ್ಧಿ, ಪ್ರಗತಿ, ಸಂಸತಿ ಮತ್ತು ವೆಭವ ಜಗತ್ತಿಗೆ ಸಾರುತ್ತಿದೆ ಎಂದರು.

ವಿಜಯಪುರ ತೆರಿಗೆ ಇಲಾಖೆ ಸಹಾಯಕ ಆಯುಕ್ತ ವೆ.ಎಸ್​.ಸಿಂಗನ್ನವರ ಮಾತನಾಡಿ, ಯುವಜನತೆ ಇಂಥ ಸಾಂಸತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಡು ನುಡಿಗೆ ಸೇವೆ ಸಲ್ಲಿಸಬೇಕು ಎಂದರು.

ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಮಾತನಾಡಿ, ನಾಡಿನ ಭವ್ಯ ಪರಂಪರೆ, ಸಂಸತಿ, ಶ್ರೀಮಂತಿಕೆ ನಾಡಹಬ್ಬದಲ್ಲಿದೆ ಎಂದರು. ಸಾಧನೆಗೆದ ಗಂಗಾಧರ ಗೊರಾಬಾಳ, ಡಾ.ಎಸ್​.ಬಿ.ಯಕ್ಕುಂಡಿ, ಆರ್​.ಎಚ್​.ಪಾಟೀಲ, ಗುರುರಾಜ ಹೊನ್ನಳ್ಳಿ, ಕಾರ್ಯಕ್ರಮದ ಪ್ರಾಯೋಜಕ ವಿರೇಶ ಬ್ಯಾಹಟ್ಟಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಕಲಾವಿದರಾದ ಯಶವಂತ ಸರದೇಶಪಾಂಡೆ, ವೀಣಾ ಸುಂದರ ಅಮರ ಮಧುರ ಪ್ರೇಮ ನಾಟಕ ಪ್ರದರ್ಶನ ಜರುಗಿತು.

ಟಿಎಪಿಸಿಎಂಎಸ್​ ಅಧ್ಯ ರವೀಂದ್ರ ಯಲಿಗಾರ ಅಧ್ಯತೆ ವಹಿಸಿದ್ದರು. ಉದ್ಯಮಿ ವಿರೇಶ ಬ್ಯಾಹಟ್ಟಿ, ತಹಸೀಲ್ದಾರ್​ ಎಂ.ಎನ್​. ಹೆಗ್ಗನ್ನವರ, ಎಂ.ಆರ್​.ಗೋಪಶೆಟ್ಟಿ, ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ವೀರಣ್ಣ ಕಮ್ಮಾರ, ಸೋಮು ಯಲಿಗಾರ. ಚಂದ್ರು ಶಾಮರಾಯನವರ, ಮಂಜು ಪಾಚಂಗಿ, ಹನುಮಂತ ಸಿಂಗನ್ನವರ, ಪುರಸಭೆ ಸದಸ್ಯರಾದ ಮೀರಾಸಾಬ್​ ವಟ್ನಾಳ, ಈಶ್ವರ ಕರೀಕಟ್ಟಿ, ಶ್ರೀಶೆಲ ನೇಗಿನಾಳ, ಬಸವರಾಜ ದೊಡಮನಿ, ಪಂಚು ಬಾರಕೇರ, ಸಮೀವುಲ್ಲಾ ಚೂರಿಖಾನ್​, ನಾಡಹಬ್ಬ ಉತ್ಸವ ಸಮಿತಿ ಅಧ್ಯ ಸುರೇಶ ಜಾವೂರ, ಪ್ರಧಾನ ಕಾರ್ಯದರ್ಶಿ ಬಿ.ಬಿ.ನಾವಲಗಟ್ಟಿ, ಕಾರ್ಯಾಧ್ಯ ಶ್ರೀಶೆಲ ಹಂಜಿ, ಕೇಶವ ಭಂಡಾರಿ, ನಾರಾಯಣ ಕಲಾಲ, ಬಿ.ಬಿ.ಹುಲಿಗೊಪ್ಪ, ಬಾಳು ಹೊಸಮನಿ, ಗುರುರಾಜ ಬೆಳವಲಗಿಡದ ಇತರರಿದ್ದರು.