ಬಂಟ್ವಾಳ: ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನ ಕಾರ್ಯಕ್ರಮ ಸೋಮವಾರ ನಡೆಯಿತು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಮಾವಂತೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಗೋಳ್ತಮಜಲು, ಉಪಾಧ್ಯಕ್ಷ ಬಿ.ಉಮ್ಮರ್ ಮಂಚಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್, ಕೃಷಿ ಅಧಿಕಾರಿ ನಂದನ್ ಶೆಣೈ ಪಿ, ಮಹಿಳಾ ರೈತ ಉತ್ಪಾದಕಾ ಸಂಘದ ಸಿಇಒ ನವ್ಯಾ ಹೊಳ್ಳ ಇದ್ದರು.
ಬಂಟ್ವಾಳ ತಾಲೂಕು ಹೋಬಳಿವಾರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮಣಿನಾಲ್ಕೂರು ಗ್ರಾಮದ ಕೃಷಿಸಖಿ ನಳಿನಾಕ್ಷಿ, ಬಾಳ್ತಿಲದ ಗುಲಾಬಿ, ಕೊಳ್ಳಾಡುವಿನ ಸುಜಾತ ಹಾಗೂ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮೊದಲು ಮುಗಿಸಿದ ಬುಡೋಳಿ ಗ್ರಾಮದ ಅನಿಲ್ ಹೆಗ್ಡೆ, ಬಾಳ್ತಿಲ ಗ್ರಾಮದ ನಾಗೇಶ್ ಹಾಗೂ ವಿಟ್ಲಮೂಡ್ನೂರು ಗ್ರಾಮದ ಪ್ರತೀಕ್ ಅವರನ್ನು ಸನ್ಮಾನಿಸಲಾಯಿತು.
ಕೃಷಿ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಹುಲ್ಲು ತೆಗೆಯುವ ಯಂತ್ರ ಹಾಗೂ ಔಷಧ ಸಿಂಪಡಿಸುವ ಯಂತ್ರ, ಟಾರ್ಪಾಲ್ ಹಾಗೂ ತುಂತುರು ನೀರಾವರಿ ಘಟಕಗಳನ್ನು ಆಯ್ದ ರೈತರಿಗೆ ವಿತರಿಸಲಾಯಿತು. ತೋಟಗಾರಿಕಾ ಇಲಾಖಾ ಸೌಲಭ್ಯಗಳ ಕುರಿತು ಜೋ ಪ್ರದೀಪ್ ಡಿಸೋಜ, ಕೃಷಿ ಇಲಾಖಾ ಸೌಲಭ್ಯಗಳ ಕುರಿತು ವೀಣಾ ಕೆ.ಆರ್. ಮಾಹಿತಿ ನೀಡಿದರು. ಕೃಷಿ ಅಧಿಕಾರಿ ನಂದನ್ ಶೆಣೈ ಪಿ. ಸ್ವಾಗತಿಸಿದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಕಾಳಗಿ ವಂದಿಸಿದರು.