ಗಂಗಾವತಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದುಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಎಲ್ಲ ವರ್ಗಕ್ಕೂ ಸಮಾನ ಶಿಕ್ಷಣ ನೀತಿ ದೃಷ್ಟಿಯಿಂದ ಕೇಂದ್ರ ಸರ್ಕಾರ ರೂಪಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜನ ಒಪ್ಪಿಕೊಂಡಿದ್ದರು. ಈ ನೀತಿ ಕಳೆದೆರೆಡು ವರ್ಷಗಳಿಂದಲೂ ಜಾರಿಯಲ್ಲಿತ್ತು. ದ್ವೇಷದ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವ ಮೂಲಕ ಶಿಕ್ಷಣ ವ್ಯವಸ್ಥೆ ಹಾಳು ಮಾಡಲು ಹೊರಟಿದೆ. ವಿದ್ಯಾರ್ಥಿಗಳು ಭವಿಷ್ಯತ್ವದ ಹಿತದೃಷ್ಟಿಯಿಂದ ಎನ್‌ಇಪಿ ಮುಂದುವರಿಸಬೇಕು ಎಂದು ಎಬಿವಿಪಿ ನಗರ ಕಾರ್ಯದರ್ಶಿ ಅಭಿಷೇಕ ಹಿರೇಮಠ ಒತ್ತಾಯಿಸಿದರು. ತಹಸಿಲ್ ಕಚೇರಿಯ ಶಿರಸ್ತೇದಾರ ಅಬ್ದುಲ್ ರಹೇಮಾನ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:
ಸಮಿತಿಯ ಪದಾಧಿಕಾರಿಗಳಾದ ಅಮಿತ್ ಹಿರೇಮಠ, ವಿಶ್ವನಾಥ ಬ್ಯಾಕೋಡ್, ಎಂ.ವಿ.ಕಿರಣ್, ಚಂದ್ರಮೌಳಿ, ತೇಜ್ ಅಸ್ಪರಿ,ಗೌತಮ, ಶ್ರೀಧರ್, ಕನಕರೆಡ್ಡಿ, ರಮೇಶ, ಪೂಜೆ, ಕನಕಪ್ಪ, ಸಂತೋಷ ಇತರರಿದ್ದರು.