ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಎಂ.ಎ0. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದಿಂದ ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನ. 28ರಂದು ಬೆಳಗ್ಗೆ 11 ಗಂಟೆಗೆ ಡಾ. ಎಂ.ಎ0. ಕಲಬುರ್ಗಿ ಅವರ 86ನೇ ಜನ್ಮದಿನ ಅಂಗವಾಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರಿನ ಹಿರಿಯ ಸಂಶೋಧಕ ಡಾ. ಎನ್.ಎಸ್. ತಾರಾನಾಥ ಅವರಿಗೆ 2024ನೇ ಸಾಲಿನ `ಡಾ. ಎಂ.ಎ0. ಕಲಬುರ್ಗಿ ಸಂಶೊಧನ ಪ್ರಶಸ್ತಿ' ಮತ್ತು ಧಾರವಾಡದ ಯುವ ಸಂಗೀತಗಾರ ಡಾ. ಶರಣಬಸಪ್ಪ ಎಸ್. ಮೇಡೆದಾರ ಅವರಿಗೆ `ಡಾ. ಎಂ.ಎ0. ಕಲಬುರ್ಗಿ ವಚನ ಸಂಗೀತ ಪ್ರಶಸ್ತಿ'ಯನ್ನು ನಾಡೋಜ ಗೊ.ರು. ಚನ್ನಬಸಪ್ಪ ಪ್ರದಾನ ಮಾಡುವರು. ಪ್ರಶಸ್ತಿಯು 25,000 ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ಇದೇವೇಳೆ `ಕನ್ನಡ ಸಂಶೋಧನ ಮಾರ್ಗ' ಸಂಪುಟ- 1 ಕೃತಿಯನ್ನು ಹಿರಿಯ ಸಾಹಿತಿ ಡಾ. ಜಿ.ಎಂ. ಹೆಗಡೆ ಅವರ ಬಿಡುಗಡೆ ಮಾಡುವರು. ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಅತಿಥಿಯಾಗಿ ಭಾಗವಹಿಸುವರು. ಉಮಾದೇವಿ ಎಂ. ಕಲಬುರ್ಗಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.