ಜಿಲ್ಲೆ

ಡಾ.ಮಹೇಶಗೆ ರಾಷ್ಟ್ರೀಯ ಸಮ್ಮಾನ

ವೀರೇಶ ಸೌದ್ರಿ

ಗೋಕರ್ಣ: ಇಲ್ಲಿನ ದಂತ ಸರ್ಜನ್ ಡಾ. ಮಹೇಶ ರಮಾನಂದ ಅಡ್ಪೇಕರ ಅವರಿಗೆ ರಾಷ್ಟ್ರೀಯ ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಸಂಘಟನೆ(ಎಚ್‌ಆರ್‌ಎಸ್‌ಜೆ) ವತಿಯಿಂದ ‘ರಾಷ್ಟ್ರೀಯ ಚಿಕಿತ್ಸಾ ಸೇವಾ ಶ್ರೀ ಸಮ್ಮಾನ’ ನೀಡಿ ಪುರಸ್ಕರಿಸಲಾಯಿತು.

ಮುಂಬೈನ ತಾಜ್‌ಮಹಲ್ ಪ್ಯಾಲೆಸ್ ಸಭಾಂಗಣದಲ್ಲಿ ಇತ್ತೀಚೆಗೆ ಕೇಂದ್ರ ಕಾರ್ಪೋರೇಟ್ ಮಂತ್ರಾಲಯದ ವತಿಯಿಂದ ರಾಷ್ಟ್ರೀಯ ನೀತಿ ಆಯೋಗದ ಸಹಯೋಗದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಡಾ. ಮಹೇಶ ಅವರಿಗೆ ಈ ರಾಷ್ಟ್ರೀಯ ಪುರಸ್ಕಾರವನ್ನು ಎಚ್‌ಆರ್‌ಎಸ್‌ಜೆ ಅಧ್ಯಕ್ಷ ರೋಹಿತ್‌ಕುಮಾರ್ ಸಿಂಗ್ ಪ್ರದಾನ ಮಾಡಿದರು.