ಮಡಿಕೇರಿ
ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮ ಪಂಚಾಯಿತಿ ದೇಶದ ಪ್ರತಿಷ್ಠಿತ ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸ್ಟೇಟ್ ವಿಕಾಸ್ ಪುರಸ್ಕಾರ್ ಗೌರವಕ್ಕೆ ಪಾತ್ರವಾಗಿದೆ. ಈ ತಿಂಗಳ 11ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ರಾಷ್ಟಿçÃಯ ಪಂಚಾಯತ್ ಪುರಸ್ಕಾರ 2024 ಕಾರ್ಯಕ್ರಮದಲ್ಲಿ ರಾಷ್ಟçಪತಿಗಳು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ಪಂಚಾಯಿತಿ ವಿಭಾಗದಲ್ಲಿ ಬಂದಿರುವ ಈ ಪ್ರಶಸ್ತಿ 1 ಕೋಟಿ ರೂ. ಮೊತ್ತದ ಬಹುಮಾನ ಒಳಗೊಂಡಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಿಂದ 7 ಕಿ.ಮೀ. ದೂರದಲ್ಲಿರುವ ಗಾಳಿಬೀಡು ಗ್ರಾಮ ಪಂಚಾಯತ್ ಅತ್ಯಂತ ಸುಂದರ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪ್ರದೇಶವಾಗಿದೆ. ನಾಲ್ಕು ಕಂದಾಯ ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ 10 ಚುನಾಯಿತ ಪ್ರತಿನಿಧಿಗಳು ಇದ್ದಾರೆ. ಪಿಡಿಒ ಶಶಿ ಕಿರಣ್ ಕೆ. ಎ. ನೇತೃತ್ವದಲ್ಲಿ ಐವರು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ 1,024 ಕುಟುಂಬಗಳಿಗೆ ಸೇರಿದ 3,802 ಜನಸಂಖ್ಯೆ ಇದೆ. 1 ಕಿರಿಯ ಪ್ರಾಥಮಿಕ, 1 ಹಿರಿಯ ಪ್ರಾಥಮಿಕ, 1 ಪ್ರೌಢ ಶಾಲೆ ಮತ್ತು 12 ಅಂಗನವಾಡಿಗಳಿವೆ.
ಬಡ ಕುಟುಂಬಗಳು ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲು ಪಂಚಾಯತ್ ಮಾನಿಟರ್, ವಾರ್ಡ್ ಸಭೆಗಳು, ಮಕ್ಕಳು ಮತ್ತು ಮಹಿಳಾ ಗ್ರಾಮ ಸಭೆಗಳನ್ನು ನಡೆಸಲಾಗುತ್ತದೆ. ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯದ ಚಟುವಟಿಕೆಗಳಿಗೆ 2022-23ನೇ ಸಾಲಿನಲ್ಲಿ ಗಾಳಿಬೀಡು ಗ್ರಾಮ ಪಂಚಾಯತ್ ಸ್ವಂತ ಮೂಲದ ಆದಾಯ 60,21,120 ರೂ. ಖರ್ಚು ಮಾಡಿದೆ. ಹೊಲಿಗೆ ಯಂತ್ರಗಳು, ಜೇನು ಪೆಟ್ಟಿಗೆಗಳು, ಮನೆ ರಿಪೇರಿ, ವೈದ್ಯಕೀಯ ಮತ್ತು ಅಂತ್ಯಕ್ರಿಯೆಯ ವೆಚ್ಚಗಳು, ಶಿಕ್ಷಣ ಮತ್ತು ಹೋಮ್‌ಸ್ಟೇಗಳು ಮತ್ತು ಹಂದಿ ಸಾಕಾಣಿಕೆಯಂತಹ ಸಣ್ಣ ವ್ಯವಹಾರಗಳಿಗೆ ಹಣಕಾಸಿನ ನೆರವು ವಿತರಿಸುವ ಮೂಲಕ ಬಡತನ ನಿರ್ಮೂಲನೆಗೆ ಈ ಮೊತ್ತ ಬಳಸಲಾಗಿದೆ.
ಕಾಫಿ, ಭತ್ತ, ಏಲಕ್ಕಿ ಹಾಗೂ ಕರಿಮೆಣಸು ಸೇರಿದಂತೆ ಕೃಷಿಯೇ ಗ್ರಾಮದ ಪ್ರಮುಖ ಆರ್ಥಿಕತೆಯ ಮೂಲವಾಗಿದೆ. ಎಂ ನರೆಗಾ ಅಡಿಯಲ್ಲಿ ಸ್ಥಳೀಯರು ಹಂದಿ ಸಾಕಾಣಿಕೆ, ಕೋಳಿ ಸಾಕಾಣೀಕೆ, ಕಾಫಿ ಮತ್ತು ಅಡಿಕೆ ಕೃಷಿ, ದನದ ಕೊಟ್ಟಿಗೆಗಳ ನಿರ್ಮಾಣದಂಥ ಅನುಕೂಲಗಳನ್ನು ಹೊಂದಿಕೊAಡಿದ್ದಾರೆ. ಸಮುದಾಯದ ಯೋಜನೆಗಳಾದ ರಸ್ತೆ ನಿರ್ಮಾಣ, ಶಾಲಾ ಉದ್ಯಾನಗಳು, ಅಮೃತಸರೋವರ ಯೋಜನೆ, ಅರಣ್ಯ ಇಲಾಖೆ ಸಹಕಾರದಲ್ಲಿ ಅರಣ್ಯೀಕರಣ ಮತ್ತಿತರ ಚಟುವಟಿಕೆಗಳಿಂದ ಉದ್ಯೋಗÀ ಸೃಷ್ಟಿ ಆಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನವೂ ಸಿಕ್ಕಂತಾಗಿದೆ.
ಬಸವ ವಸತಿ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ 30 ವಸತಿಹೀನರಿಗೆ ಮನೆ ಒದಗಿಸಲಾಗಿದೆ. ಪಿಎಂ ಅಂತ್ಯೋದಯ ಯೋಜನೆ ಸಮರ್ಪಕವಾಗಿ ಜಾರಿಗೆ ತರಲಾಗಿದ್ದು ಜೀವನ ಮಟ್ಟವನ್ನು ಹೆಚ್ಚಿಸಲು ಸಹಕರಿಸಿದೆ. ಎಲ್ಲಾ 1024 ಕುಟುಂಬಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಬರುತ್ತದೆ. ವಿಶೇಷ ಮತ್ತು ಅಶಕ್ತ ನಿವಾಸಿಗಳಿಗೆ ಮೊಬೈಲ್ ಪಡಿತರ ವ್ಯವಸ್ಥೆಯೊಂದಿಗೆ ಸಕಾಲಿಕ ಪಡಿತರ ವಿತರಣೆ ಮಾಡಲಾಗುತ್ತಿದೆ.
ಗ್ರಾಮ ಪಂಚಾಯಿತಿಯ ಬಹುಪಾಲು ಹಣವನ್ನು ಗ್ರಾಮ ಮಟ್ಟದಲ್ಲಿ ಸರಿಯಾದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಬಳಸಲಾಗುತ್ತಿದೆ. ಕಾಂಪೌAಡ್, ಹುಡುಗಿಯರು ಮತ್ತು ಹುಡುಗರಿಗಾಗಿ ಪ್ರತ್ಯೇಕ ಶೌಚಗೃಹಗಳು, ಕ್ರೀಡಾ ಸಾಮಗ್ರಿಗಳ ವಿತರಣೆ ಗ್ರಾಮ ಪಂಚಾಯತ್‌ನಿAದ ಮಾಡಲಾಗಿದೆ. ಗ್ರಾಮದ ಡಿಜಿಟಲ್ ಲೈಬ್ರರಿ ಕಂಪ್ಯೂಟರ್ ಸಾಕ್ಷರತೆ ಹೆಚ್ಚಿಸುವಲ್ಲಿ ಪೂರಕವಾಗಿದೆ. ಚಿತ್ರಕಲೆ, ಗಣಿತ ಉತ್ಸವ, ಚೆಸ್ ಸ್ಪರ್ಧೆಗಳಂಥ ವಿವಿಧ ಚಟುವಟಿಕೆಗಳೊಂದಿಗೆ ಶಾಲಾ ಸೌಲಭ್ಯಗಳನ್ನು ಉತ್ತಮಪಡಿಸಲು ಸಹಕರಿಸಲಾಗಿದೆ.
ಗಾಳಿಬೀಡು ಬಯಲು ಶೌಚ ಮುಕ್ತ ಪಂಚಾಯಿತಿಯಾಗಿದ್ದು, ಬಯಲು ಶೌಚ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಪಾತ್ರವಾಗಿದೆ. ಪಂಚಾಯತ್ ಸ್ವಸಹಾಯ ಗುಂಪಿನ ಸಹಾಯದಿಂದ ಪಂಚಾಯತ್ ಅನ್ನು ಸ್ವಚ್ಛ ಮತ್ತು ಹಸಿರಾಗಿಡಲು ತ್ಯಾಜ್ಯ ಸಂಗ್ರಹಣೆ ಮತ್ತು ಶುಚಿಗೊಳಿಸುವ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. 105 ಕಿಮೀ ವ್ಯಾಪ್ತಿಯ ಪಂಚಾಯಿತಿಯಲ್ಲಿ ಅಲ್ಲಲ್ಲಿ ಮನೆಗಳಿಗೆ ನೀರು ಒದಗಿಸುವುದು ಪಂಚಾಯಿತಿಗೆ ದೊಡ್ಡ ಸವಾಲಾಗಿತ್ತು. ಆದರೆ ಸಮುದಾಯದ ಬೆಂಬಲದೊAದಿಗೆ ವರ್ಷಪೂರ್ತಿ ಕುಡಿಯುವ ನೀರನ್ನು ಎಲ್ಲಾ ಕುಟುಂಬಗಳಿಗೆ ಗುರುತ್ವಾಕರ್ಷಣ ಬಲದಿಂದ ಉಚಿತವಾಗಿ ಪೂರೈಸಲಾಗುತ್ತಿದೆ. ನಿಯಮಿತವಾಗಿ ನೀರಿನ ಪರೀಕ್ಷೆಯನ್ನೂ ನಡೆಸಲಾಗುತ್ತಿರುತ್ತದೆ. ಕೆಲವು ಕಡೆಗಳಲ್ಲಿ ಈ ನೀರು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಪಂಚಾಯತಿ ಸದಾ ಅತಿವೃಷ್ಠಿ ಪೀಡಿತವಾಗಿದೆ. ಆಗಾಗ್ಗೆ ಉಂಟಾಗುವ ಪ್ರವಾಹ ಮತ್ತು ಭೂಕುಸಿತ ಪರಿಸ್ಥಿತಿ ಎದುರಿಸಲು ಗ್ರಾಮ ಪಂಚಾಯತಿಯಿAದ ವಿಪತ್ತು ನಿರ್ವಹಣಾ ಕಾರ್ಯಪಡೆಯನ್ನು ರಚಿಸಲಾಗಿದೆ. ಯಾವುದೇ ಪ್ರಾಣಹಾನಿಯಾಗದಂತೆ ಕಾಳಜಿ ಕೇಂದ್ರಗಳ ವ್ಯವಸ್ಥೆಯನ್ನೂ ಮಾಡುವ ಮೂಲಕ ನಿವಾಸಿಗಳ ಪರ ಕಾಳಜಿ ತೋರಿಸಲಾಗುತ್ತಿದೆ. ಪಂಚಾಯಿತಿಯ ಈ ಕಾರ್ಯಕ್ಕೆ ಪಿಡಿಒ ಶಶಿ ಕಿರಣ್ ಕೆ.ಎ. ಅವರಿಗೆ ಸರ್ವೋತ್ತಮ ಸೇವಾ ಪುರಸ್ಕಾರವೂ ದೊರೆತಿದೆ.
ಪಂಚಾಯಿತಿ ವ್ಯಾಪ್ತಿಯ ಸ್ವ-ಸಹಾಯ ಗುಂಪುಗಳಿಗೆ ಸದಾ ಪ್ರೋತ್ಸಾಹ ನೀಡಲಾಗುತ್ತಿದೆ. ಮೀನು ಸಾಕಾಣಿಕೆ, ವೈನ್ ತಯಾರಿಕೆ, ಕಾಫಿ, ಜೇನುತುಪ್ಪ ಸಂಸ್ಕರಣೆ, ಮಸಾಲೆ ಪದಾರ್ಥ ಮತ್ತು ಚಾಕೊಲೇಟ್ ತಯಾರಿಕೆಯಂಥ ಉದ್ಯಮಗಳನ್ನು ನಡೆಸಲು ಎನ್‌ಆರ್‌ಎಲ್‌ಎಂ ಮೂಲಕ ಸಾಲ ಒದಗಿಸಲಾಗುತ್ತದೆ. ಗ್ರಾಮ ಪಂಚಾಯಿತಿ ಬೆಂಬಲದೊAದಿಗೆ ಸ್ವಸಹಾಯ ಗುಂಪಿನ ಮಹಿಳೆಯರು ತಮ್ಮದೇ ಆದ ಕೈಗಾರಿಕೆ ಸ್ಥಾಪಿಸಿದ್ದಾರೆ. ಇವರ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನೂ ತಲುಪಿದ್ದು, ಅವರ ಆರ್ಥಿಕತೆ ಮಟ್ಟ ಹೆಚ್ಚಾಗಲು ಕಾರಣವಾಗಿದೆ.
ಗಾಳಿಬೀಡು ಗ್ರಾ.ಪಂ. ಸತತ ನಾಲ್ಕು ವರ್ಷಗಳಿಂದ ಗಾಂಧಿ ಗ್ರಾಮ ಪುರಸ್ಕಾರ ಗೆದ್ದುಕೊಂಡಿದೆ. ಸರ್ಕಾರ ಮತ್ತು ತಾಜ್‌ನಂಥ ಸಂಸ್ಥೆಗಳ ಬೆಂಬಲದ ಮೂಲಕ ಗಾಳಿಬೀಡು ಗ್ರಾಮ ಪಂಚಾಯತ್ ಸುಸ್ಥಿರ ಗ್ರಾಮೀಣ ಅಭಿವೃದ್ಧಿಗೂ ಮಾದರಿಯಾಗಿದೆ.
ಗಾಳಿಬೀಡು ಗ್ರಾಮ ಪಂಚಾಯಿತಿಗೆ ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ಪಂಚಾಯಿತಿ ವಿಭಾಗದಲ್ಲಿ ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸ್ಟೇಟ್ ವಿಕಾಸ್ ಪುರಸ್ಕಾರ್ ಬಂದಿದೆ. ಬುಧವಾರ (ಡಿ.11) ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ರಾಷ್ಟಿçÃಯ ಪಂಚಾಯತ್ ಪುರಸ್ಕಾರ 2024 ಕಾರ್ಯಕ್ರಮದಲ್ಲಿ ರಾಷ್ಟçಪತಿಗಳು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 1 ಕೋಟಿ ರೂ. ನಗದು ಒಳಗೊಂಡಿರುವ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ಪಂಚಾಯತಿ ಅಧ್ಯಕ್ಷೆ ಉಷಾ ಬಿ.ಜಿ., ಪಿಡಿಒ ಕೆ.ಎ. ಶಶಿ ಕಿರಣ್ ನವದೆಹಲಿಗೆ ತೆರಳುತ್ತಿದ್ದಾರೆ. ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶೇಖರ್ ಕೂಡ ಜತೆಯಲ್ಲಿ ತೆರಳಲಿದ್ದಾರೆ.
ನಮ್ಮ ಪಂಚಾಯಿತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗಿದೆ. ಹಿರಿಯ ಅಧಿಕಾರಿಗಳ ಸಲಹೆ, ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಶ್ರಮವೂ ಇದರ ಹಿಂದಿದೆ. ಮುಂದಿನ ವರ್ಷಗಳಲ್ಲಿ ಸಣ್ಣ ರೈತರನ್ನು ಸುಸ್ಥಿರ ಕೃಷಿಯತ್ತ ಸೆಳೆಯಲು ಸೂಕ್ತ ತರಬೇತಿ ಕೊಡುವ ಚಿಂತನೆ ಇದೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು. ನವೀಕರಿಸಬಹುದಾದ ಸಂಪನ್ಮೂಲಗಳ ಮೂಲಕ ನಾಗರಿಕರ ಜೀವನೋಪಾಯ ವೃದ್ಧಿಸುವ ಯೋಚನೆಯೂ ಇದೆ.
ಕೆ.ಎ. ಶಶಿ ಕಿರಣ್, ಪಿಡಿಒ, ಗಾಳಿಬೀಡು ಗ್ರಾ.ಪಂ.