ಚನ್ನಗಿರಿ: ಭಾರತದ ಹಿರಿಮೆ ತಿಳಿಸಲು ರವಿಂದ್ರನಾಥ ಟ್ಯಾಗೋರ್ ಅವರು ಬರೆದ ಪದ್ಯವೇ ಇಂದು ರಾಷ್ಟ್ರಗೀತೆಯಾಗಿದೆ ಎಂದು ಸರ್ಕಾರಿ ಮೌಲಾನ ಅಜಾದ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ವಿಶ್ವನಾಥ್ ತಿಳಿಸಿದರು.
ತಾಲೂಕಿನ ಸಂತೇಬೆನ್ನೂರು ಸರ್ಕಾರಿ ಮೌಲಾನ ಅಜಾದ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜ್ಯ ಕಲಾ ಸಂಸ್ಕೃತಿ ಪರಿಷತ್ ಮತ್ತು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರಗೀತೆ ಹಾಡುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಶನಿವಾರ ಮಾತನಾಡಿದರು.
ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಪಡೆದ ನಂತರದಲ್ಲಿ ಟ್ಯಾಗೋರರು ಬರೆದಂತ ಪದ್ಯ ರಾಷ್ಟ್ರಗೀತೆಯಾಗಿ, ಅಂದಿನ ಎಲ್ಲ ನಾಯಕರ ಒಪ್ಪಿಗೆಯಂತೆ ಅಂಗೀಕರಿಸಲಾಯಿತು ಎಂದು ವಿವರಿಸಿದರು.
ರಾಷ್ಟ್ರಗೀತೆ ಹಾಡುವ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿನಿ ಕೆಕಷಾ ಪ್ರಥಮ, ದ್ವಿತೀಯ ಬಹುಮಾನ ಬುಷರಾ ಖಾನಂ, ತೃತೀಯ ಬಹುಮಾನ ಕುತೇಜಾ ಖಾನಂ ಮತ್ತು ವರ್ಷಿಣಿ ಪಡೆದರು.
ರಾಜ್ಯ ಕಲಾ ಸಂಸ್ಕೃತಿ ಪರಿಷತ್ ಅಧ್ಯಕ್ಷ ಏಕಲವ್ಯ ನಾಗರಾಜ್, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ವಾಹಿದ್, ವಿಎಸ್‌ಎಸ್ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಪಂ ಸದಸ್ಯ ರಾಮತ್ ವುಲ್ಲಾ, ಸಂಘಟನಾ ಕಾರ್ಯದರ್ಶಿ ಎಸ್.ಜೆ. ಕಿರಣ್, ಮಹಿಳಾ ಕಾರ್ಯದರ್ಶಿ ಶಶಿಕಲಾ ಗಿರೀಶ್, ಮಹೇಶ್ವರಪ್ಪ, ಹನುಮಂತ ರಾಯಪ್ಪ, ತೇಜಸ್ವಿ, ಗಂಗಾಧರ್, ಶಿವರಾಜ್‌ಕುಮಾರ್ ಇದ್ದರು.