ಬಿಸರಹಳ್ಳಿ ಗ್ರಾಮದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ನಡೆದ ಇಂಜನಿಯರ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಗೋವಿಂದರಡ್ಡಿ ತವದಿ ಮಾತನಾಡಿದರು. ಪ್ರಮುಖರಾದ ರವೀಂದ್ರಗೌಡ, ನಾಗಪ್ಪ, ಆನಂದ, ಬಸವರಾಜ, ಮಹಾಂತೇಶ ಹಾಗೂ ಇತರರು ಇದ್ದರು. 
ಜಿಲ್ಲೆ

ರಾಷ್ಟ್ರ ನಿರ್ಮಾಣದಲ್ಲಿ ಇಂಜನೀಯರರ ಪಾತ್ರ ದೊಡ್ಡದು

Kopala - Desk - Eraveni

ಅಳವಂಡಿ: ರಾಷ್ಟ್ರ ನಿರ್ಮಾಣದಲ್ಲಿ ಇಂಜನೀಯರರ ಪಾತ್ರ ದೊಡ್ಡದು. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಅಂಗವಾಗಿ ಇಂಜನೀಯರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ಗೋವಿಂದರಡ್ಡಿ ತವದಿ ತಿಳಿಸಿದರು.

ಸಮೀಪದ ಬಿಸರಹಳ್ಳಿ ಗ್ರಾಮದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ನಡೆದ ಇಂಜನಿಯರ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಸರಕಾರ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಿದ್ದು ಅವುಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಯೋಜನೆ ತಲುಪಿಸುವಲ್ಲಿ ಸಂಘಗಳು ಸಹ ಕ್ರಿಯಾಶಿಲವಾಗಿ ಕೆಲಸ ಮಾಡಬೇಕು ಎಂದರು.

ಗ್ರಾಪಂ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ಸರ್.ಎಂ.ವಿಶ್ವೇಶ್ವರಯ್ಯ ಕಾರ್ಮಿಕ ಸಂಘದ ಅಧ್ಯಕ್ಷ ನಾಗಪ್ಪ ಬಿಕನಳ್ಳಿ,
ಪ್ರಮುಖರಾದ ಆನಂದ ಮೇಗಳಮನಿ, ಬಸವರಾಜ, ಹಾಲಪ್ಪ, ಮಹಾಂತೇಶ, ಮಾಬುಸಾಬ, ಉಮೇಶ, ಮಲ್ಲಪ್ಪ, ಭರಮಪ್ಪ, ಮುಸ್ತಪಾ,
ಅಂಬರೇಶ, ಷಣ್ಮುಖಪ್ಪ, ರವಿಕುಮಾರ, ಶರಣು ಗದ್ದಿ ಇದ್ದರು.