ಹನೂರು : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಟರಾಜು ಅವಿರೊಧವಾಗಿ ಆಯ್ಕೆಯಾದರು.
12 ನಿರ್ದೇಶಕರ ಬಲವನ್ನು ಹೊಂದಿರುವ ಈ ಸಂಘದಲ್ಲಿ ಕಳೆದ 4 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ರಾಚಪ್ಪ ಅವರು ಆಂತರಿಕ ಒಪ್ಪಂದದಂತೆ ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆಯನ್ನು ಸೋಮವಾರ ನಿಗದಿಪಡಿಸಲಾಗಿತ್ತು. ಆದರೆ ನಟರಾಜು ಹೊರತು ಪಡಿಸಿದರೆ ಯಾರೊಬ್ಬರು ನಾಮಪತ್ರ ಸಲ್ಲಿಸಿರಲಿಲ್ಲ. ಹಾಗಾಗಿ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿ ಘೋಷಿಸಲಾಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಮಹಮದ್ ನದೀಮ್ ಕಾರ್ಯನಿರ್ವಹಿಸಿದರು.
ಸಂಘದ ಸಿಇಒ ಬಸವರಾಜು, ಉಪಾಧ್ಯಕ್ಷ ಸೈಯದ್ ಭಾಷಾ, ನಿರ್ದೇಶಕರಾದ ಶ್ರೀನಿವಾಸಗೌಡ, ಸಿದ್ದರಾಜು, ಮಂಜೇಶ್, ಶಂಕರೇಗೌಡ, ಗೋವಿಂದ ಹಾಗೂ ಇನ್ನಿತರರು ಇದ್ದರು.