ಜಿಲ್ಲೆ

ಮೂಗಿನ ಮೂಲಕ ಮಿದುಳಿನ ಶಸಚಿಕಿತ್ಸೆ

ಪ್ರಶಾಂತ ಹೂಗಾರ

ಕಾಗವಾಡ: ಮಹಾರಾಷ್ಟ್ರದ ಇಚಲಕರಂಜಿ ನಗರದ ಆಕ್ಸಾನ್ ಆಸ್ಪತ್ರೆ ನರ ಶಸಚಿಕಿತ್ಸಕ ಡಾ. ವೈಭವ ಚವ್ಹಾಣ ಈಚೆಗೆ ಎರಡು ಅಪರೂಪದ ಎಂಡೋಸ್ಕೋಪಿಕ್ ಟ್ರಾನ್ಸ್‌ನಾಸಲ್ ಮಿದುಳಿನ ಶಸಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಡಾ. ವೈಭವ ಚವ್ಹಾಣ ಮಾತನಾಡಿ, ಆ. 21ರಂದು 55 ವರ್ಷದ ವ್ಯಕ್ತಿಯೊಬ್ಬರಿಗೆ ಪಿಟ್ಯುಟರಿ ಗ್ರಂಥಿಯ ಮೂಗಿನ ಶಸಚಿಕಿತ್ಸೆ ಮಾಡಲಾಯಿತು. ಶಸಚಿಕಿತ್ಸೆ ಮುನ್ನ ಅವರ ದೃಷ್ಟಿ ಕ್ಷೀಣಿಸಿತ್ತು. ನಂತರ ದೃಷ್ಟಿ ಸುಧಾರಿಸಿದೆ ಎಂದರು.

ಆ.22ರಂದು ತಲೆಗೆ ಬಿದ್ದ ಹೊಡೆತದಿಂದ ಬಲಗಣ್ಣಿನ ನರ ಸಂಕುಚಿತವಾಗಿ ದೃಷ್ಟಿ ಕಳೆದುಕೊಂಡಿದ್ದ 25 ವರ್ಷದ ಯುವಕನಿಗೆ ಯಶಸ್ವಿಯಾಗಿ ಶಸಚಿಕಿತ್ಸೆ ಮಾಡಿದ್ದೇವೆ. ಅವರಿಗೆ ಮೂಗಿನ ಮೂಲಕ ದ್ರವ ಸೋರಿಕೆಯಾಗುವ ಸಮಸ್ಯೆಯಾಗಿದ್ದನ್ನು ಎಂಡೋಸ್ಕೋಪಿಕ್ ಆಪ್ಟಿಕ್ ನರ್ವ್ ಡಿಕಂಪ್ರೆಷನ್ ಶಸಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. ಈಗ ಅವರ ಬಲಗಣ್ಣಿನ ದೃಷ್ಟಿ ಸುಧಾರಿಸತೊಡಗಿದ್ದು, ಭವಿಷ್ಯದಲ್ಲಿ ಇನ್ನೂ ಸುಧಾರಿಸುವ ಸಾಧ್ಯತೆ ಇದೆ ಎಂದರು.

ಡಾ.ವೈಭವ ಚವ್ಹಾಣ ಅವರಿಗೆ ಇಎನ್‌ಟಿ ಶಸಚಿಕಿತ್ಸಕ ಡಾ.ಸಂದೇಶ ಬಾಗಡಿ, ಅರಿವಳಿಕೆ ತಜ್ಞ ಡಾ.ಶರದ್ ಮಿಥಾರಿ, ಡಾ.ಮಧುರಾ ದೇಶಪಾಂಡೆ, ಡಾ.ತ್ರಿಶಾ ಚವ್ಹಾಣ ಅವರು ಸಾಥ ನೀಡಿದ್ದಾರೆ.