ಜಿಲ್ಲೆ

ನರ್ತನ ದೀಪ್ತಿ, ತಾಳಲಹರಿ ಕಾರ್ಯಕ್ರಮ

ಅವಿನಾಶ್ ಜೈನಹಳ್ಳಿ

ನೃತ್ಯ ವಿದ್ಯಾ ಪೀಠ ಅಕಾಡೆಮಿ ಆಫ್ ಕ್ಲಾಸಿಕಲ್ ಡಾನ್ಸ್ ಆ್ಯಂಡ್ ಇಂಡಿಯನ್ ಆರ್ಟ್ಸ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆ. 4 ರಂದು ಸಂಜೆ 5.45ಕ್ಕೆ ಕಿರುರಂಗಮಂದಿರದಲ್ಲಿ ‘ನರ್ತನ ದೀಪ್ತಿ’ ಮತ್ತು ‘ತಾಳಲಹರಿ’ ಕಾರ್ಯಕ್ರಮ ಆಯೋಜಿಸಿದೆ.

ನೃತ್ಯ ಗುರು ವಿದುಷಿ ಸಿ.ಎನ್.ಅನಿತಾ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಸೀನಿಯರ್ ಹಂತದ ನೃತ್ಯ ವಿದ್ಯಾರ್ಥಿಗಳು ನರ್ತನ ದೀಪ್ತಿ ಹಾಗೂ ತಾಳಲಹರಿ ಕಾರ್ಯಕ್ರಮವನ್ನು ಪ್ರಸ್ತುತಗೊಳಿಸಲಿದ್ದಾರೆ.

ಮೊದಲಿಗೆ ಬಿ.ಜೆ.ಮನಿಷಾ, ತನಿಷಾ ವಿಜಯ್‌ಕುಮಾರ್, ಎಚ್.ಜನ್ಮಿತಾ, ನೇಹಾ ಡಿ.ಎಸ್.ರೆಡ್ಡಿ, ಆರ್.ಸುಪ್ರಿತಾ, ಮಾನ್ಯ ನಾಗೇಶ್, ಎನ್.ಮನಸ್ವಿ, ನರ್ತನ ದೀಪ್ತಿ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ಬಳಿಕ ಸಂಹಿತಾ ಜಿ.ಕಿರಣ್, ಕೆ.ವೈ.ಖುಷಿ, ಭೂಮಿಕಾ ಪಾಂಡು, ಪರಿಣಿತ ಆನಂದ್, ಲಕ್ಷ್ಮಣ ದಿನೇಶ್, ಎಂ.ಎಸ್.ನಾಗಶ್ರೀ, ಎಸ್.ಸಂಚಿತಾ, ಅನನ್ಯಾ ಸಜ್ಜನರ್, ಸುಮಾ ಕಿರಣ್ ತಾಳ ಲಹರಿ ಕಾರ್ಯಕ್ರಮ ನೀಡಲಿದ್ದಾರೆ. ಇವರಿಗೆ ಎಸ್.ಅನಘ(ನಟುವಾಂಗ), ನಯನ ನಾಗರಾಜ್(ಹಾಡುಗಾರಿಕೆ), ವಿದ್ವಾನ್ ಜಿ.ಟಿ.ಸ್ವಾಮಿ(ಮೃದಂಗ), ವಿದ್ವಾನ್ ತಾಂಡವಮೂರ್ತಿ(ಪಿಟೀಲು) ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.

ಜತೆಗೆ ಸಂಸ್ಥೆಯಲ್ಲಿ ವಿಶೇಷ ಅಭ್ಯಾಸದಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿನಿಯರಿಂದ ತಟ್ಟುಮಣೆ ನಿರ್ವಹಣಾ ಪಾಠಾಂತರದ ಪ್ರಾತ್ಯಕ್ಷಿಕೆ ನಡೆಯಲಿದೆ.