ಜಿಲ್ಲೆ

ದರೋಡೆಗೈದ ಮೊತ್ತ ೩೦ ಲಕ್ಷವಲ್ಲ, ೫ ಕೋಟಿ ರೂ. - *ಪ್ರಕರಣ ಮುಚ್ಚಿ ಹಾಕಲು ದರೋಡೆಕೋರರಿಗೇ ಹಣ ನೀಡಿದ್ದ ಉದ್ಯಮಿ

Mangaluru - Nishantha Narayana

ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಽಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ಮೊತ್ತವನ್ನು ಎಫ್‌ಐಆರ್‌ನಲ್ಲಿ ೩೦ ಲಕ್ಷ ರೂ. ಎಂದು ದಾಖಲಿಸಿದ್ದರೂ, ೫ ಕೋಟಿ ರೂ. ದರೋಡೆಗೈಯಲಾಗಿದೆ ಎಂಬ ಮಾಹಿತಿ ಆರೋಪಿ ಅಬ್ದುಲ್ ನಾಸಿರ್ ಎಂಬಾತನ ವಿಚಾರಣೆಯಿಂದ ಬಹಿರಂಗಗೊಂಡಿದೆ.

-.೧೭ರಂದು ವಶಕ್ಕೆ ಪಡೆದ ಕೇರಳದ ಕಣ್ಣೂರು ನಿವಾಸಿ ಅಬ್ದುಲ್ ನಾಸಿರ್(೫೨)ನನು ತೀವ್ರ ವಿಚಾರಣೆ ನಡೆಸಲಾಗಿದೆ. ಆತ ಎಎಸ್‌ಐ ಶಫೀರ್‌ಬಾಬುನನ್ನು ಸಿರಾಜುದ್ದೀನ್‌ಗೆ ಪರಿಚಯಿಸಿದ್ದನು. ಸಿರಾಜುದ್ದೀನ್ ನಾರ್ಶ ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಉದ್ಯಮಿ ಸುಲೈಮಾನ್ ಹಾಜಿ ಅವರಲ್ಲಿ ಅರ್ಥಿಕ ಸಹಾಯ ಕೇಳಿದ್ದನು. ಅವರು ನಿರಾಕರಿಸಿದ್ದರಿಂದ ಇಡಿಗೆ ಮಾಹಿತಿ ನೀಡಿ ಅವರಿಂದ ಬಹುಮಾನವಾಗಿ ಸಿಗುವ ಹಣವನ್ನು ತಾಯಿಯ ಚಿಕಿತ್ಸೆಗೆ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದನು. ಆದರೆ ಆತನಿಗೆ ಅಬ್ದುಲ್ ನಾಸಿರ್ ಎಎಸ್‌ಐ ಶಫೀರ್ ಬಾಬುನನ್ನು ಇಡಿ ಅಽಕಾರಿ ಎಂದು ಪರಿಚಯಿಸಿದ್ದನು.

*ಗೋಣಿಚೀಲದಲ್ಲಿ ಹಣ ನೀಡಿದ್ದರು:

ಜಾರಿ ನಿರ್ದೇಶನಾಲಯ ಅಽಕಾರಿಗಳೆಂದು ಭಾವಿಸಿದ ಉದ್ಯಮಿ ಸುಲೈಮಾನ್ ಹಾಜಿ ಪ್ರಕರಣವನ್ನು ಮುಚ್ಚಿಹಾಕಬೇಕು ಮತ್ತು ತೊಂದರೆ ಕೊಡುವುದು ಬೇಡ ಎಂದು ದರೋಡೆಕೋರರಿಗೆ ಇನ್ನೊಂದು ಗೋಣಿಚೀಲದಲ್ಲಿ ನಗದು ನೀಡಿದ್ದರು. ದರೋಡೆಕೋರರು ಅದನ್ನು ತಮ್ಮಲ್ಲೇ ಉಳಿಸಿಕೊಂಡು, ದರೋಡೆಗೈದ ಹಣವನ್ನು ಎಎಸ್‌ಐ ಶಫೀರ್ ಬಾಬುಗೆ ನೀಡಿದ್ದರು.

*೭ ಮಂದಿ ಬಂಽತರು:

ಪ್ರಕರಣದಲ್ಲಿ ತ್ರಿಶ್ಶೂರು ಕೊಡಂಗಲ್ಲೂರು ಪೊಲೀಸ್ ಠಾಣೆ ಎಎಸ್‌ಐ ಆಗಿದ್ದ ಶಫೀರ್‌ಬಾಬು(೪೮), ಮಹಮ್ಮದ್ ಇಕ್ಬಾಲ್(೩೮), ಕೊಳ್ನಾಡು ಗ್ರಾಮದ ಸಿರಾಜುದ್ದೀನ್ ನಾರ್ಶ(೩೭), ಮಂಗಳೂರು ಪಡೀಲ್ ನಿವಾಸಿ ಮಹಮ್ಮದ್ ಅನ್ಸಾರ್(೨೭), ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ -ರ್ನಾಂಡಿಸ್(೪೯), ಸಚಿನ್ ಟಿ.ಎಸ್.(೨೯) ಮತ್ತು ಶಬಿನ್ ಎಸ್.(೨೭) ಬಂಽತರು. ಅವರಿಂದ ಕೇವಲ ೫ ಲಕ್ಷ ರೂ. ವಶಕ್ಕೆ ಪಡೆದಿರುವುದಾಗಿ ದಾಖಲೆಯಲ್ಲಿ ತೋರಿಸಲಾಗಿದೆ. ಎಎಸ್‌ಐ ಶಫೀರ್ ಬಾಬುನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆಯಾದರೂ, ಆತನಿಂದ ಹಣ ಇಟ್ಟಿರುವ ಜಾಗದ ಮಾಹಿತಿ ಸಂಗ್ರಹಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎನ್ನಲಾಗಿದೆ.