ಜಿಲ್ಲೆ

ನಾರಿ ಸಮ್ಮಾನ್ -2024 ರಾಷ್ಟ್ರಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬಾಬುರಾವ ಯಡ್ರಾಮಿ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳೆಯರಿಗೆ ಬೆಂಗಳೂರಿನ ಮಿಡಿಯಾ ವಿಷನ ಸಂಸ್ಥೆ ಕೊಡ ಮಾಡುವ ನಾರಿ ಸಮ್ಮಾನ್-೨೦೨೪ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಬಿಎಂವಿ ಕಲಾ ಟ್ರಸ್ಟ್ ಹಾಗೂ ಬಸವ ಪರಿಷತ್ ಸಹಯೋಗದಲ್ಲಿ ಏಪ್ರಿಲ್ ೨೦ ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಲೆ, ಸಾಹಿತ್ಯ, ಕ್ರೀಡೆ, ವೈದ್ಯಕೀಯ, ಪರಿಸರ, ಸಾಮಾಜಿಕ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕಿ ಮಹಿಳೆಯರು ಸ್ವ ವಿವರ ಹಾಗೂ ಸೇವಾ ದಾಖಲಾತಿಯೊಂದಿಗೆ ಮಾ.೩೦ರೊಳಗೆ ಅಧ್ಯಕ್ಷರು, ಬಸವ ಪರಿಷತ್ ಗಣೇಶ ಮಹಲ್ ಪ್ಲಾಟ್ ನಂ.೫೩,  ಎರಡನೇ ಮಹಡಿ, ನಂ.೨೬೭, ೧೮ನೇ ಕ್ರಾಸ್, ಸಂಪಿಗೆ ರೋಡ್  ಮಲ್ಲೇಶ್ವರಂ ಬೆಂಗಳೂರು-೫೬೦೦೦೩ ಈ ವಿಳಾಸಕ್ಕೆ ಸಲ್ಲಿಸಬಹುದು. ಮಾಹಿತಿಗೆ ೭೨೫೯೪೫೬೫೫೫/ ೯೮೮೦೦೫೨೯೧೪ ಸಂಪರ್ಕಿಸಬಹುದು