ಜಿಲ್ಲೆ

ನಾರಿ ನಿನಗೊಂದು ಸಾರಿ ಸ್ಪರ್ಧೆ ವಿಜೇತರ ಆಯ್ಕೆ

ಹಿರೇಕೆರೂರ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ಹಿರೇಕೆರೂರ, ರಟ್ಟಿಹಳ್ಳಿ ವಿಧಾನಸಭಾ ಕ್ಷೇತ್ರದ ಐವರು ಅದೃಷ್ಟವಂತ ವಿಜೇತರನ್ನು ವಿದ್ಯಾರ್ಥಿನಿಯರು ಆಯ್ಕೆ ಮಾಡಿದರು.

ಸ್ಪರ್ಧೆಯಲ್ಲಿ ಹಿರೇಕೆರೂರ, ರಟ್ಟಿಹಳ್ಳಿ ವಿಧಾನಸಭಾ ಕ್ಷೇತ್ರದ ಸಾವಿರಾರು ಓದುಗರು ಭಾಗವಹಿಸಿದ್ದರು. ಆ. 1ರಿಂದ ಸೆ.15 ರವರೆಗೆ ಸ್ಪರ್ಧೆಯಲ್ಲಿ ಸರಿ ಉತ್ತರ ಬರೆದು ಕಳುಹಿಸಿದ ಕೂಪನ್​ಗಳನ್ನು ಶಾಲೆಯ ಆವರಣದಲ್ಲಿ ಟೇಬಲ್ ಮೇಲೆ ಹಾಕಲಾಗಿತ್ತು. ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಸಮ್ಮುಖದಲ್ಲಿ ಐವರು ವಿಜೇತರನ್ನು ಕೂಪನ್ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.

ಶಿಕ್ಷಕಿಯರಾದ ಸುಮಾ ಎಸ್., ಸೌಮ್ಯಾ ಬಿದರಿ, ಸುಧಾ ಬಣಕಾರ, ಶಿಕ್ಷಕರಾದ ಮೇಘರಾಜ ಮಾಳಗಿಮನಿ, ಪಿ.ವಿ. ಹುಲ್ಮನಿ, ಎಸ್.ವಿ. ಪಾಟೀಲ ಹಾಗೂ ವಿದ್ಯಾರ್ಥಿನೀಯರು ಇದ್ದರು.

ಸಾರಿ ವಿಜೇತರು:

1. ರಾಜಭಕ್ಷ ಗವೇನವರ, ನಿಡನೇಗಿಲು

2. ಮಧು ಯಲಿ, ಹಂಸಭಾವಿ

3. ರೇಣುಕಾ ವಿ.ಎಸ್., ಚನ್ನಳ್ಳಿ

4. ಶೋಭಾ ಒಂಟಕರ

5. ಸುಮಂಗಲಾ ಉಕ್ಕಡಗಾತ್ರಿ, ರಟ್ಟಿಹಳ್ಳಿ