ಜಿಲ್ಲೆ

ಸೀರೆಗೆ ಇದೆ ಅದರದೇ ಆದ ಮಹತ್ವ - ಅಟಲ್ ಉದ್ಯಾನ ಧಾರ್ಮಿಕ ಶಿಕ್ಷಣ ಕೇಂದ್ರದ ನಿರ್ವಾಹಕಿ ವಿ.ಪ್ರಭಾವತಿ ಅನಿಸಿಕೆ

Mangaluru - Nishantha Narayana

ಪುತ್ತೂರು: ಸೀರೆಗೆ ಅದರದೇ ಆದ ಮಹತ್ವವಿದ್ದು, ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಮಹಿಳೆಯರು ಸೀರೆಯ ಬಳಕೆಯನ್ನು ಹೆಚ್ಚು ಮಾಡಬೇಕಾಗಿದೆ. ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಸೀರೆಯ ಮೇಲೆ ವಿಶೇಷವಾದ ವ್ಯಾಮೋಹವಿರುತ್ತದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸಭ್ಯತೆಯ ಉಡುಪುಗಳನ್ನೇ ಧರಿಸುವಂತಾಗಬೇಕೆಂಬ ಮೂಲ ಉದ್ದೇಶವನ್ನು ಶಿಕ್ಷಣ ಕೇಂದ್ರವೂ ಇಟ್ಟುಕೊಂಡಿದೆ ಎಂದು ಕೊಂಬೆಟ್ಟು -ಬೊಳುವಾರು ಅಟಲ್ ಉದ್ಯಾನ ಧಾರ್ಮಿಕ ಶಿಕ್ಷಣ ಕೇಂದ್ರದ ನಿರ್ವಾಹಕಿ ವಿ.ಪ್ರಭಾವತಿ ಹೇಳಿದರು.

ಶನಿವಾರ ಪುತ್ತೂರಿನಲ್ಲಿ ಕರ್ನಾಟಕ ದೇವಾಲಯ ಸಂವರ್ಧನ ಸಮಿತಿ ಮುನ್ನಡೆಸುತ್ತಿರುವ ಕೊಂಬೆಟ್ಟು -ಬೊಳುವಾರು ಅಟಲ್ ಉದ್ಯಾನ ಧಾರ್ಮಿಕ ಶಿಕ್ಷಣ ಕೇಂದ್ರ-೩ ವತಿಯಿಂದ ವಿಜಯವಾಣಿ ಪತ್ರಿಕೆಯ ನಾರಿ ನಿನಗೊಂದು ಸ್ಯಾರಿ ಬಹುಮಾನ ಯೋಜನೆಯ ಲಕ್ಕಿ ಡ್ರಾ ನೆರವೇರಿಸಿ ಮಾತನಾಡಿದರು.

ವಿಜಯವಾಣಿ ಪತ್ರಿಕೆ ಮಹಿಳೆಯರಿಗಾಗಿ ಮಾಡುತ್ತಿರುವ ಕಾರ್ಯಕ್ರಮ ಹೆಮ್ಮೆಯ ವಿಚಾರವಾಗಿದೆ. ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಓದಿದಾಗ ಅಲ್ಲಿ ನೀಡುವ ಕೊಡುಗೆಗಳನ್ನು ಹೆಚ್ಚು ಪಡೆದುಕೊಳ್ಳ ಬಹುದಾಗಿದೆ. ಮಕ್ಕಳಲ್ಲಿಯೂ ಓದು ಹವ್ಯಾಸವನ್ನು ಬೆಳೆಸಿಕೊಳ್ಳಲು ಪತ್ರಿಕೆಗಳು ಸಹಕಾರಿ ಎಂದರು.

ಪುತ್ತೂರು ತಾಲೂಕಿನ ೩೦ ಮಂದಿ ಅದೃಷ್ಟಶಾಲಿಗಳನ್ನು ೧೫ ಮಂದಿ ಮಹಿಳೆಯರು ಆಯ್ಕೆ ಮಾಡಿದರು. ಮಾತೆಯರಾದ ಪುಷ್ಪಾ ಜೈನ್, ಮೂಕಾಂಬಿಕಾ, ಸರಸ್ವತಿ, ಶೀತಲ್, ಶಕಿಲಾ, ಧನಲಕ್ಷ್ಮೀ, ವಿಜಯವಾಣಿ ವರದಿಗಾರ ನಿಶಾಂತ ಬಿಲ್ಲಂಪದವು, ಪ್ರಸರಣ ವಿಭಾಗದ ಗಿರೀಶ್ ಉಪಸ್ಥಿತರಿದ್ದರು.