ನರಗುಂದ ತಹಸೀಲ್ದಾರ್ ಎ.ಡಿ. ಅಮರಾವದಗಿ ಅವರನ್ನು ಸೋಮವಾರ ಸತ್ಕರಿಸಿ ಬೀಳ್ಕೊಡಲಾಯಿತು. ಪ್ರಭಾರಿ ತಹಸೀಲ್ದಾರ್ ವಾಣಿ ಉಂಕಿ, ಮಲ್ಲಿಕಾರ್ಜುನ ಶೆಟ್ಟರ, ಎ.ಆರ್. ಭೋವಿ, ಎಸ್.ಎಲ್. ಪಾಟೀಲ, ಎಸ್. ಸುನಂದಾ, ಇತರರಿದ್ದರು. 
ಜಿಲ್ಲೆ

ತಹಸೀಲ್ದಾರ್ ಅಮರಾವದಗಿ ವರ್ಗಾವಣೆ

ರವಿ ಎಸ್. ಬಳೂಟಗಿ

ನರಗುಂದ: ತಾಲೂಕಿನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ವಿಜಯಪುರ ಜಿಲ್ಲೆ ನಿಡಗುಂದಿಗೆ ಗ್ರೇಡ್-1 ತಹಸೀಲ್ದಾರ್ ಆಗಿ ವರ್ಗಾವಣೆಗೊಂಡ ಎ.ಡಿ. ಅಮರಾವದಗಿ ಅವರನ್ನು ಪಟ್ಟಣದಲ್ಲಿ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ನಾಗರಿಕರು ಸತ್ಕರಿಸಿ ಸೋಮವಾರ ಬೀಳ್ಕೊಡುಗೆ ನೀಡಿದರು.

ಎ.ಡಿ. ಅಮರಾವದಗಿ ಮಾತನಾಡಿ, ನರಗುಂದದಲ್ಲಿ ಕಾರ್ಯನಿರ್ವಹಿಸುವುದು ಅತ್ಯಂತ ಪುಣ್ಯದ ಕೆಲಸ. ಕಂದಾಯ ಇಲಾಖೆಯಿಂದ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಿದ ತೃಪ್ತಿಯಿದೆ. ತಾಲೂಕಿಗೆ ನೇಮಕವಾದಾಗ ಮೊದಲು ಭಯ ಕಾಡುತ್ತಿತ್ತು. ಆದರೆ, ಇಲ್ಲಿನ ಜನರು ತೋರಿದ ಪ್ರೀತಿ, ವಿಶ್ವಾಸ ಮರೆಯಲು ಸಾಧ್ಯವಿಲ್ಲ. ಬಡವರ ಕೆಲಸ ಪ್ರಾಮಾಣಿಕವಾಗಿ ನಿರ್ವಹಿಸಿದ ತೃಪ್ತಿ ನನಗಿದೆ ಎಂದು ಹೇಳಿದರು.

ರೋಣ ತಹಸೀಲ್ದಾರ್ ವಾಣಿ ಉಂಕಿ ನರಗುಂದ ತಾಲೂಕು ಪ್ರಭಾರಿ ತಹಸೀಲ್ದಾರ್ ಆಗಿ ನೇಮಕಗೊಂಡಿದ್ದು ಅವರನ್ನೂ ಸನ್ಮಾನಿಸಲಾಯಿತು. ಎಸ್.ಎಲ್. ಪಾಟೀಲ, ಕೆ.ಆರ್. ಆರೇರ, ಆನಂದ ಬನಪ್ಪನವರ, ಎ.ಆರ್. ಭೋವಿ, ಮಲ್ಲಿಕಾರ್ಜುನ ಶೆಟ್ಟರ, ಪಾಂಡು ತಳವಾರ, ಎಚ್.ಬಿ. ಮೇಲಿನಮನಿ, ಐ.ವೈ. ಕಳಸಣ್ಣವರ, ಅನಿಲ ಹದಗಲ್ಲ, ಪ್ರಕಾಶ ಪೂಜಾರಿ, ಹಂಪಣ್ಣ ಯತ್ನಟ್ಟಿ, ಶಿರಸ್ತೇದಾರ ಎಸ್. ಸುನಂದ, ಐ.ಟಿ. ಜಂತ್ಲಿ, ಆರ್.ಎನ್. ಬಡಿಗೇರ, ಎಸ್.ಎಸ್. ಉಳ್ಳೆಗಟ್ಟಿ, ಟಿ.ಪಿ. ಪಾಟೀಲ, ಇತರರಿದ್ದರು.