ನರಗುಂದ: ಕನ್ನಡಪರ ಸಂಘಟನೆ ಒಕ್ಕೂಟದಿಂದ ಆಯೋಜಿಸಿದ್ದ ಅತ್ಯುತ್ತಮ ಗಣಪತಿ ಸ್ಪರ್ಧೆಯ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನ ಮಾಡಲಾಯಿತು. ನಗರದ ಗಾಂಧಿ ವರ್ತುಲದಲ್ಲಿ ಪ್ರತಿಷ್ಠಾಪಿಸಿದ್ದ ವರ್ತಕರ ಸಂಘದ ಗಣಪತಿಗೆ ಪ್ರಥಮ ಸ್ಥಾನ, ಸೋಮಾಪೂರ ಬಡಾವಣೆಯ ನರಗುಂದ ಕಾ ರಾಜಾ ಗಣೀಶನಿಗೆ ದ್ವಿತೀಯ, ರಾಚಯ್ಯ ನಗರದ ಗಣೇಶೋತ್ಸವ ಸಮಿತಿ ತೃತೀಯ ಸ್ಥಾನ ಪಡೆಯಿತು. ಸಮಿತಿ ಸದಸ್ಯರಿಗೆ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಯಿತು. ಚಿತ್ರಕಲಾ ಶಿಕ್ಷಕ ಕಾಳಪ್ಪ ಬಡಿಗೇರ, ಪಿ.ವಿ. ಹಳೇಮನಿ, ಪಿ.ವಿ. ಹೂಗಾರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಚನ್ನು ನಂದಿ, ರಾಘವೇಂದ್ರ ಗುಜಮಾಗಡಿ, ಎ.ಪಿ. ಪಾಟೀಲ, ವಾಸುರೆಡ್ಡಿ ಹೆಬ್ಬಾಳ, ಮುತ್ತು ವಡ್ಡಿಗೇರಿ, ರವಿ ವಡ್ಡಿಗೇರಿ, ರಾಘವೇಂದ್ರ ಕಲಾಲ, ಸಂಗಪ್ಪ ಗೋವೇಶ್ವರ, ವಿಜಯ ಕೊಪ್ಪಳ, ಬದ್ರಿ ಗುಡಿಸಾಗರ, ಇತರರಿದ್ದರು.