ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮದ ನಾಲೆ ಹೂಳು ಎತ್ತುವ ಕಾಮಗಾರಿಯನ್ನು ಕೇಂದ್ರ ಜಲ ಶಕ್ತಿ ಆಯೋಗದ ಅಧಿಕಾರಿ ಸತ್ಯಮೂರ್ತಿ ಪರಿಶೀಲಿಸಿದರು. ತಾಪಂ ನರೇಗಾ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ, ಪಿಡಿಒ ತಿಮ್ಮಪ್ಪ ಇದ್ದರು. 
ಜಿಲ್ಲೆ

ನರೇಗಾ ಕಾಮಗಾರಿ ವೀಕ್ಷಿಸಿದ ಕೇಂದ್ರ ತಂಡ

ನರೇಶ್ ಕುಮಾರ್

ಮಸ್ಕಿ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದ ಜಲಶಕ್ತಿ ಆಯೋಗದ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಜಲ ಸಂರಕ್ಷಣೆ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು.

ತೋರಣದಿನ್ನಿ, ವಟಗಲ್, ಸಂತೆಕೆಲ್ಲೂರು, ಹಿರೇದಿನ್ನಿ, ಬಪ್ಪೂರು, ಗೌಡನಬಾವಿ ಗ್ರಾಪಂಗಳಲ್ಲಿ ಜಲ ಸಿಂಚಯ ಜನ್ ಭಾಗೀದಾರ್ ಯೋಜನೆಯಡಿ ನರೇಗಾದಡಿ ಅನುಷ್ಠಾನಗೊಂಡ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೇಂದ್ರ ಜಲ ಶಕ್ತಿ ಆಯೋಗದ ಅಧಿಕಾರಿ ಸತ್ಯಮೂರ್ತಿ ಅವರು ವೀಕ್ಷಿಸಿದರು.

2023-24 ಮತ್ತು 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದ ಹಳ್ಳ, ಕೆರೆ ಹೂಳು ಎತ್ತುವ ಕಾಮಗಾರಿಗಳನ್ನು ಪರಿಶೀಲಿಸಿ ನರೇಗಾದಡಿ ಕೂಲಿಕಾರರಿಗೆ ಕೆಲಸ ನೀಡಿರುವುದರ ಬಗ್ಗೆ ಮಾಹಿತಿ ಪಡೆದರು.

ನರೇಗಾ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ, ತಾಂತ್ರಿಕ ಸಂಯೋಜಕ ಅಶೋಕ, ತಾಂತ್ರಿಕ ಎಇ ಸೋಮಶೇಖರ, ಶಿವಕುಮಾರ ಯಾದವ ಇತರರಿದ್ದರು.