ಅಳವಂಡಿ: ನರೇಗಾದಡಿ ಅನುಷ್ಠಾನಗೊಂಡ ಬಹದ್ದೂರಬಂಡಿ, ಬಿಸರಳ್ಳಿ, ಕೋಳೂರು ಗ್ರಾಪಂಗಳ ಕಾಮಗಾರಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ ಕುಮಾರ ಮಾಲಪಾಟಿ ಶನಿವಾರ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ಮಾಡಿದರು.
ಇದನ್ನು ಓದಿ:ನಕಲಿ ಜಾಬ್ಕಾರ್ಡಗಳಿಗೆ ಕೂಲಿ ಹಣ ಜಮೆ
ಬಹದ್ದೂರಬಂಡಿ ಗ್ರಾಪಂನ ಹೂವಿನಾಳ ರಸ್ತೆಯ ಬದಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕೆಲಸ, ಕಾರ್ಯ ನಿರ್ವಹಣೆ ಪರಿಶೀಲಿಸಿದರು. ಸ್ಥಳದಲ್ಲಿದ್ದ ಕೂಲಿಕಾರರ ಜತೆ ಸಮಾಲೋಚಿಸಿದರು. ಜಾಬ್‌ಕಾರ್ಡ್‌ಗಳಲ್ಲಿ ಕೂಲಿ ಕೆಲಸ ನಿರ್ವಹಿಸಿದ ಬಗ್ಗೆ ಸಂಪೂರ್ಣ ಮಾಹಿತಿ ಅಪ್‌ಡೇಟ್ ಮಾಡತಕ್ಕದ್ದು. ಇದರಿಂದ ಕೂಲಿಕಾರರಿಗೆ ವರ್ಷದಲ್ಲಿ ಎಷ್ಟು ದಿನ ಕೆಲಸ ನಿರ್ವಹಿಸಿದ್ದೇವೆ ಹಾಗೂ ಎಷ್ಟು ಕೂಲಿ ಹಣ ಪಾವತಿಯಾಗಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಮೆಟ್‌ಗಳು ಕೂಲಿಕಾರರಿಗೆ ಅಳತೆ ಕುರಿತು ಸರಿಯಾಗಿ ಮಾಹಿತಿ ನೀಡಬೇಕು ಎಂದರು.
ಬಿಕನಳ್ಳಿ ರಸ್ತೆಯ ಬದಿ ನೆಡುತೋಪು ಕಾಮಗಾರಿ ವೀಕ್ಷಿಸಿದರು. ರೈತ ಬಸವರೆಡ್ಡಿ, ನರೇಗಾದಡಿ ಬಾಳೆ ಬೆಳೆದಿದ್ದು, ಕೂಲಿ, ಸಾಮಗ್ರಿ ಹಣ ಪಾವತಿಯಾಗಿರುವ ಬಗ್ಗೆ ಮಾಹಿತಿ ಪಡೆದರು. ವೈಯಕ್ತಿಕ ಸೌಲಭ್ಯ ಪಡೆಯಲು 5 ಲಕ್ಷ ರೂ. ಅವಕಾಶ ಇರುವುದರಿಂದ ದಾಳಿಂಬೆ ಇತ್ಯಾದಿ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ಈ ಬಗ್ಗೆ ರೈತರಿಗೆ ಪ್ರೇರೇಪಣೆ ನೀಡಬೇಕೆಂದು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಕೋಳೂರು ಗ್ರಾಪಂನ ಕಾಟರಳ್ಳಿ ಸ.ಹಿ.ಪ್ರಾ. ಶಾಲೆಯಲ್ಲಿ ನಿರ್ಮಿಸಲಾದ ಶೌಚಗೃಹ, ಅಡುಗೆ ಕೊಣೆ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಕಾಮಗಾರಿಗೆ ಬಳಸಿದ ಸಾಮಾಗ್ರಿಗಳ ಗೆ ಬಳಕೆ ಮಾಡಿಕೊಂಡ ಬಗ್ಗೆ ಕಡತದಲ್ಲಿನ ಐಟಂವಾರು ದಾಖಲಾತಿ ಪರಿಶೀಲಿಸಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಆಯುಕ್ತಾಲಯದ ಜಂಟಿ ನಿರ್ದೇಶಕ(ತೋಟಗಾರಿಕೆ) ಶ್ರೀಶೈಲ ದಿಡ್ಡಿಮನಿ, ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ರಾಜ್ಯ ಯೋಜನಾ ಅಭಿಯಂತರ ಯಶವಂತ, ತಾಪಂ ಇಒ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಂಕ್ರಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರನಗೌಡ, ಜಿಪಂ ಎಡಿಪಿಸಿ ಮಹಾಂತಸ್ವಾಮಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎಂಐಎಸ್ ಸಂಯೋಜಕ ಮೈನುದ್ದೀನ್ ಇತರರಿದ್ದರು.