ಜಿಲ್ಲೆ

12.58 ಲಕ್ಷ ರೂ. ಮೌಲ್ಯದ ಮಾದಕ ವಸ್ತು ದಹನ

Gadag - Desk - Tippanna Avadoot

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಸ್.ವಿ ಗಿರೀಶ ನೇತೃತ್ವದಲ್ಲಿ ಗುರುವಾರ ತಾಲೂಕಿನ ಬೊಗ್ರಿಬೈಲ್​ನ ಕೆನರಾ ಐಎಂಎ (ಉ.ಕ.) ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಒಟ್ಟು 12.58 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ದಹಿಸಲಾಯಿತು.

ಕಾರವಾರ, ಭಟ್ಕಳ, ಶಿರಸಿ ಮತ್ತು ದಾಂಡೇಲಿ ಉಪ ವಿಭಾಗ ಸೇರಿ ಒಟ್ಟು 37 ಪ್ರಕರಣಕ್ಕೆ ಸಂಬಂಧಿಸಿದಂತೆ 4.36 ಲಕ್ಷ ರೂ. ಮೌಲ್ಯದ 12. 761 ಗ್ರಾಂ ಗಾಂಜಾ, 2.22 ಲಕ್ಷ ರೂ. ಮೌಲ್ಯದ 37 ಗಾಂಜಾ ಗಿಡಗಳು, 6 ಲಕ್ಷ ರೂ. ಮೌಲ್ಯದ 925 ಗ್ರಾಂ. 322 ಮಿಲಿ ಗ್ರಾಂ ಚರಸ್ ಅನ್ನು ಅಗ್ನಿಯಲ್ಲಿ ದಹಿಸಲಾಯಿತು.

ಪಿಐಗಳಾದ ಚಂದ್ರಶೇಖರ ಜಿ. ಮಠಪತಿ ಅಂಕೋಲಾ, ರಂಗನಾಥ ನೀಲಮ್ಮನವರ್ ಮುಂಡಗೋಡ, ವಸಂತ ಆಚಾರಿ ಗೋಕರ್ಣ, ಪಿಎಸ್​ಗಳಾದ ಉದ್ದಪ್ಪ ಧರೆಪ್ಪನವರ್, ಸುಹಾಸ್ ಆರ್. ಅಂಕೋಲಾ, ರವೀಂದ್ರ ಬಿರಾದರ್ ಕಾರವಾರ ಶಹರ, ಡಿಸಿಆರ್​ಬಿ ಕಾರವಾರ ವಿಭಾಗದ ಪ್ರವೀಣ ರೇವಂಡಿಕರ, ನಾಗೇಶ ಹರಿಕಂತ್ರ, ಬೊಗ್ರಿಬೈಲ್​ನ ಕೆನರಾ ಐಎಂಎ (ಉ.ಕ.) ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ವ್ಯವಸ್ಥಾಪಕ ಅನೀಶ ಗಣಪತಿ ನಾಯ್ಕ, ಮೇಲ್ವಿಚಾರಕ ಪ್ರಸನ್ನ ಪಿ. ನಾಯ್ಕ, ತಾಂತ್ರಿಕ ಸಿಬ್ಬಂದಿ ನಾಗರಾಜ ಎಂ. ನಾಯ್ಕ, ಮಹೇಂದ್ರ ನಾಯ್ಕ ಇತರರಿದ್ದರು.