ಪಾಂಡವಪುರ ತಾಲೂಕಿನ ಕೋಡಾಲ ನೀರು ಬಳಕೆದಾರರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಾರಾಯಣಪುರ ಎನ್.ಡಿ.ದೇವೇಗೌಡ ಹಾಗೂ ಕೋಡಾಲ ಕೃಷ್ಣೇಗೌಡ ಅವರನ್ನು ಮುಖಂಡರು ಅಭಿನಂದಿಸಿದರು. 
ಜಿಲ್ಲೆ

ಅಧ್ಯಕ್ಷರಾಗಿ ನಾರಾಯಣಪುರ ದೇವೇಗೌಡ ಆಯ್ಕೆ

ಪಾಂಡವಪುರ: ತಾಲೂಕಿನ ಕೋಡಾಲ ನೀರು ಬಳಕೆದಾರರ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣಪುರ ಎನ್.ಡಿ.ದೇವೇಗೌಡ(ಸುಂದ್ರಣ್ಣ) ಹಾಗೂ ಉಪಾಧ್ಯಕ್ಷರಾಗಿ ಕೋಡಾಲ ಕೃಷ್ಣೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಎನ್.ಡಿ.ದೇವೇಗೌಡ ಮಾತನಾಡಿ, ಕೋಡಾಲ ನೀರು ಬಳಕೆದಾರರ ಸಂಘಕ್ಕೆ ನನ್ನನ್ನು ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಂಘದ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸಂಘದ ವ್ಯಾಪ್ತಿಯಲ್ಲಿ ಬರುವ ಕೃಷಿಗೆ ನೀರಾವರಿ ಅನುಕೂಲಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಸೆಳೆದು ಅನುದಾನ ತಂದು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದರು.

ನೂತನ ಅಧ್ಯಕ್ಷ ಎನ್.ಡಿ.ದೇವೇಗೌಡ ಹಾಗೂ ಉಪಾಧ್ಯಕ್ಷ ಕೋಡಾಲ ಕೃಷ್ಣೇಗೌಡ ಅವರನ್ನು ಮುಖಂಡರು ಅಭಿನಂದಿಸಿದರು. ನಿರ್ದೇಶಕರಾದ ಕೆ.ಯೋಗರಾಜ್, ನರಸೇಗೌಡ, ದೇವರಾಜ್, ಜೋಗೀಗೌಡ, ವೆಂಕಟರಾಮೇಗೌಡ, ಎಂ.ಕೆ.ಪ್ರಕಾಶ್, ಪುಟ್ಟಲಕ್ಷ್ಮಮ್ಮ, ಶಂಕರೇಗೌಡ, ಕರಿಶೆಟ್ಟಿ, ಕಾರ್ಯದರ್ಶಿ ನರಸಿಂಹೇಗೌಡ, ಚುನಾವಣಾಧಿಕಾರಿ ಅನಿಲ್‌ಕುಮಾರ್ ಹಾಜರಿದ್ದರು.